ಪಾಕಿಸ್ತಾನ ಹಾಗೂ ಚೀನಾ ಇದೀಗ ಬಾಂಧವ್ಯದ ಹಸ್ತ ಚಾಚಿದ್ದು, ಈ ನಿಟ್ಟಿನಲ್ಲಿ ಭಾರೀ ಹೆಜ್ಜೆಯನ್ನಿರಿಸಿವೆ. ಇದೀಗ ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ಬಾಹ್ಯಾಕಾಶ ಸಂವಹನ ಉಪಗ್ರಹವೊಂದನ್ನು ಉಡಾಯಿಸಲಿದ್ದು, ಇದು ಪಾಕ್ ಹಾಗೂ ಚೀನಾದ ಬಾಂಧವ್ಯದಲ್ಲೊಂದು ಪ್ರಮುಖ ಮೈಲುಗಲ್ಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಾಕ್‌ಸಾತ್- 1ಆರ್ ಎಂಬ ಈ ಉಪಗ್ರಹ 2011ರಲ್ಲಿ ಉಡಾಯಿಸಲಿದ್ದು, ಇದರಿಂದ ಪಾಕಿಸ್ತಾನಕ್ಕೆ ಸಾಕಷ್ಟು ಉಪಯೋಗವಾಗಲಿದೆ ಎಂದು ಪಾಕ್‌ನ ಚೀನಾ ರಾಯಭಾರಿ ಮಸೂದ್ ಖಾನ್ ಹೇಳಿದ್ದಾರೆ.
2008ರಲ್ಲೇ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭ ಈ ಒಪ್ಪಂದ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಚೀನಾ ರಷ್ಯಾದ ಜೊತೆ ಸೇರಿ ಮಂಗಳನ ಅಧ್ಯಯನದ ತಂತ್ರಜ್ಞಾನ ನಡೆಸುತ್ತಿದ್ದು, ಪಾಕಿಸ್ತಾನವೂ ಮುಂದೊಂದು ದಿನ ಚೀನಾ ಜೊತೆ ಇನ್ನ ಹೆಚ್ಚಿನ ಉತ್ತಮ ವೈಜ್ಞಾನಿಕ ಕಾರ್ಯಗಳನ್ನು ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.