ಕೆನಡಾದಲ್ಲಿ ಪ್ರಪ್ರಥಮ ಬಾರಿಗೆ ಮುಸ್ಲಿಮ್ ಮೇಯರ್ ಅವರನ್ನು ನೇಮಕ ಮಾಡುವ ಮೂಲಕ ನೂತನ ಇತಿಹಾಸ ಸೃಷ್ಟಿಸಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಹಾರ್ವರ್ಡ್ ಯೂನಿರ್ವಸಿಟಿ ಪದವೀಧರರಾಗಿರುವ ಇಸ್ಲಾಮೈಲಿ ಮುಸ್ಲಿಮ್ ನಾಹೀದ್ ನೆನ್ಶಿ ತಮ್ಮ ಸಮೀಪ ಇಬ್ಬರು ಪ್ರತಿಸ್ಪರ್ಧಿಗಳನ್ನು ಸೋಲಿಸಿ ಕಾಲ್‌ಗ್ರೈ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕೆನಡಾ ಕನ್ಸರ್ಸವೇಟಿವ್ (ಬಲಪಂಥೀಯ) ಪಕ್ಷದ ಪ್ರಬಲ ಬಲ ಹೊಂದಿದೆ. ಅಷ್ಟೇ ಅಲ್ಲ ಕಾಲ್‌ಗ್ರೈ ಪ್ರಧಾನಮಂತ್ರಿ ಸ್ಟೇಫನ್ ಹಾರ್ಪರ್ ಅವರ ತವರೂರು. ಆ ನಿಟ್ಟಿನಲ್ಲಿ ಪ್ರಧಾನಿ ಬೆಂಬಲಿತ ಓರ್ವ ಅಭ್ಯರ್ಥಿಯನ್ನೇ ಪರಾಜಯಗೊಳಿಸಿ 38ರ ಹರೆಯದ ನೆನ್ಶಿ ಮುನ್ಸಿಪಲ್ ಮೇಯರ್ ಆಗಿ ಗೆಲುವು ಸಾಧಿಸಿದ್ದಾರೆ.
ಇವತ್ತಿನ ದಿನ ತುಂಬಾ ಮಹತ್ವವಾದದ್ದು, ಇದು ಕೇವಲ ನನಗೆ ಮಾತ್ರವಲ್ಲ, ಎಲ್ಲರಿಗೂ ಎಂದು ಗೆಲುವಿನ ನಂತರ ಹರ್ಷವ್ಯಕ್ತಪಡಿಸಿ ಮಾತನಾಡಿದ ನೆನ್ಶಿ, ಈ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ, ಕೆನಡಾ ನಗರದಲ್ಲಿ ಮೊದಲ ಬಾರಿಗೆ ಬಿಳಿ ಜನಾಂಗೇತರ ಅಭ್ಯರ್ಥಿಯೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಪ್ರಧಾನಮಂತ್ರಿ ಕಚೇರಿ ಅಭಿನಂದನೆ ಸಲ್ಲಿಸಿದೆ.