ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಅಬ್ದುಲ್ಲಾ ಮೊಮ್ಮಗ, ಸೌದಿ ರಾಜನಿಗೆ ಬ್ರಿಟನ್ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದು, ಯಾರೊಬ್ಬರೂ ದೇಶದ ಕಾನೂನಿಗಿಂತ ಮಿಗಿಲಲ್ಲ ಎಂದು ತೀರ್ಪಿನ ಸಂದರ್ಭದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ತನ್ನ ಆಪ್ತ ವ್ಯಕ್ತಿ ಬಾಂದಾರ್ ಅಬ್ದುಲಾಜಿಜ್ (32)ನನ್ನು ಸೌದಿ ರಾಜ ಸೌದ್ ಅಬ್ದುಲಾಜಿಜ್ ಬಿನ್ ನಾಸ್ಸೆರ್ ಅಲ್ ಸೌದ್ (34) ಕೊಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಲಂಡನ್‌ನ ಓಲ್ಡ್ ಬೈಲೈ ಕೋರ್ಟ್ ನ್ಯಾಯಾಧೀಶರು 20 ವರ್ಷ ಜೈಲುಶಿಕ್ಷೆ ವಿಧಿಸಿದ್ದಾರೆ.
ರಾಜನೊಬ್ಬ ಕೊಲೆ ಆರೋಪದಲ್ಲಿ ಸಿಲುಕಿರುವುದು ನಿಜಕ್ಕೂ ಆಘಾತಕಾರಿ ಘಟನೆಯಾಗಿದೆ. ಅಲ್ಲದೇ ದೇಶದ ಕಾನೂನಿಗಿಂತ ಯಾರೊಬ್ಬರೂ ಮೇಲಲ್ಲ ಎಂದು ಶಿಕ್ಷೆಯ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶ ಡೇವಿಡ್ ಬೀನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
2010ರ ಫೆಬ್ರುವರಿ ತಿಂಗಳಲ್ಲಿ ಬಾಂದಾರ್ ಅಬ್ದುಲಾಜಿಜ್ ಅವರನ್ನು ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ ಹೊಡೆದು, ಕತ್ತು ಹಿಸುಕಿ ಹತ್ಯೆಗೈಯಲಾಗಿತ್ತು. ಲೈಂಗಿಕ ಹಿಂಸಾಚಾರದಲ್ಲಿಯೇ ರಾಜಾ ನಾಸ್ಸೆರ್ ಅಲ್ ಸೌದ್ ಬಾಂದಾರ್ ಅವರನ್ನು ಹೊಡೆದು ಕೊಂದಿರುವ ಆರೋಪ ಸಾಬೀತಾಗಿತ್ತು.