ಮಿಲಿಟರಿ ಆಡಳಿತ ಹೊಂದಿರುವ ಮ್ಯಾನ್ಮಾರ್‌ನಲ್ಲಿ ಸುಮಾರು 20 ವರ್ಷಗಳ ನಂತರ ನವೆಂಬರ್ 7ರಂದು ನಡೆಯಲಿರುವ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ವಿದೇಶಿ ಮಾಧ್ಯಮಕ್ಕೆ ದೇಶದೊಳಕ್ಕೆ ಬರಲು ಅನುಮತಿ ಇಲ್ಲ ಎಂದು ಮ್ಯಾನ್ಮಾರ್ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗ ರಾಯಭಾರಿಗಳು ಮತ್ತು ಮ್ಯಾನ್ಮಾರ್ ಮೂಲದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ, ಯಾವುದೇ ವಿದೇಶಿ ಮಾಧ್ಯಮಗಳಿಗೆ ದೇಶದೊಳಕ್ಕೆ ಪ್ರವೇಶಕ್ಕೆ ಅನುಮತಿ ಇಲ್ಲ, ಅದೇ ರೀತಿ ಚುನಾವಣೆಯಲ್ಲಿ ವಿದೇಶಿ ಚುನಾವಣಾ ವೀಕ್ಷಕರು ಇರುವುದಿಲ್ಲ ಎಂದು ಹೇಳಿದೆ.
ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ನಿಟ್ಟಿನಲ್ಲಿ ಚುನಾವಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಮಿಲಿಟರಿ ಜುಂಟಾ ತಿಳಿಸಿದೆ. ಕಳೆದ ಐವತ್ತು ವರ್ಷಗಳಿಂದ ಮ್ಯಾನ್ಮಾರ್ ಅನ್ನು ಜುಂಟಾ ಆಳುತ್ತಿದೆ. ಏತನ್ಮಧ್ಯೆ, ಸಾರ್ವತ್ರಿಕ ಚುನಾವಣೆ ನಂತರ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂ ಕೀಯನ್ನು ಬಿಡುಗಡೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಮ್ಯಾಮ್ಮಾರ್ ತಿಳಿಸಿತ್ತು.