ಹಿಂಸಾಚಾರ ಪೀಡಿತ ಮೆಕ್ಸಿಕೋ ನಗರದ ಪೊಲೀಸ್ ಮುಖ್ಯಸ್ಥೆಯಾಗಿ 20 ಹರೆಯದ ಅಪರಾಧ ಶಾಸ್ತ್ರ ವಿದ್ಯಾರ್ಥಿನಿಯೊಬ್ಬಳು ನೇಮಕವಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಮಾರಿಸೋಲ್ ವೆಲ್ಲೆಸ್ ಗಾರ್ಸಿಯಾ ಸೋಮವಾರ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ. ಅಮೆರಿಕ ಗಡಿಯ ಪೂರ್ವಭಾಗದ ಸಿಯುಡಾಡ್ ಜುವಾರೆಜ್ ನಗರ ಸುಮಾರು ಹತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇದು ಮೆಕ್ಸಿಕೋದ ಅತೀ ಹೆಚ್ಚಿನ ಹಿಂಸಾಚಾರ ಪೀಡಿತ ನಗರ ಎಂದೇ ಕುಖ್ಯಾತಿ ಪಡೆದಿದೆ.
ಸಿಯುಡಾಡ್ ಜುವಾರೆಜ್‌ನ ಮಾಜಿ ಮೇಯರ್ ಗುವಾಡಾಲುಪೆ ಡಿಸ್ಟ್ರೈಟೋ ಬ್ರಾವೋಸ್, ಜೆಸುಸ್ ಲಾರಾ ರೋಡ್ರಿಗಸ್ ಅವರನ್ನು ಜೂನ್ 19ರಂದು ದುಷ್ಕರ್ಮಿಗಳು ಹತ್ಯೆಗೈದಿದ್ದರು.
ಇದೀಗ ಈ ನಗರದ ನೂತನ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡಿರುವ ವೆಲ್ಲೆಸ್ ಗಾರ್ಸಿಯಾ, ತಾನು ಡ್ರಗ್ ಗ್ಯಾಂಗ್ ವಿರುದ್ಧ ತನ್ನ ಹೋರಾಟ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕ ವಲಯದಲ್ಲಿ ಶಾಂತಿ ಕಾಪಾಡುವುದೇ ತನ್ನ ಮುಖ್ಯ ಗುರಿ ಎಂದು ತಿಳಿಸಿದ್ದಾರೆ.