ಗೃಹಬಂಧನ; ಸೂ ಕೀ ಮನವಿ ವಿಚಾರಣೆಗೆ ಸುಪ್ರೀಂ ಗ್ರೀನ್‌ಸಿಗ್ನಲ್
ಯಾಂಗೋನ್, ಗುರುವಾರ, 21 ಅಕ್ಟೋಬರ್ 2010( 16:14 IST )
ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕೀಯ ಗೃಹಬಂಧನ ಪ್ರಕರಣದ ಕುರಿತಂತೆ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಲು ಮ್ಯಾನ್ಮಾರ್ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಸೂ ಕೀಯ ವಕೀಲರೊಬ್ಬರು ತಿಳಿಸಿದ್ದಾರೆ.
ಗೃಹಬಂಧನ ಮುಕ್ತಿ ಕೋರಿ ಸೂ ಕೀ ಸಲ್ಲಿಸಿರುವ ವಿಶೇಷ ಮನವಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳು ವಿಚಾರಣೆ ನಡೆಸಲಿದ್ದಾರೆ. ಆದರೆ ವಿಚಾರಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ.
ಆ ನಿಟ್ಟಿನಲ್ಲಿ ನಾನು ಯಾವತ್ತೂ ಆಶಾವಾದಿಗಳು ಎಂದು ವಕೀಲ ಕಿನ್ ಹಾಟಾಯ್ ಕೈವೆ ತಿಳಿಸಿದ್ದಾರೆ. ಸೂ ಕೀಯ ವಿಶೇಷ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲು ಒಪ್ಪಿರುವುದಾಗಿ ಮ್ಯಾನ್ಮಾರ್ ಮಿಲಿಟರಿ ಆಡಳಿತದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆದರೆ ಅಧಿಕಾರಿ ತಮ್ಮ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.
ಸೂ ಕೀಯ ಗೃಹಬಂಧನ ನವೆಂಬರ್ 13ಕ್ಕೆ ಅಂತ್ಯಗೊಳ್ಳಲಿದೆ. ಏತನ್ಮಧ್ಯೆ ನ.7ರಂದು ದೇಶದಲ್ಲಿ ಸುಮಾರು 20 ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆ ಬಳಿಕ ಸೂ ಕೀಯನ್ನು ಬಂಧಮುಕ್ತಗೊಳಿಸುವುದಾಗಿ ಮ್ಯಾನ್ಮಾರ್ ತಿಳಿಸಿತ್ತು.