ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಷ್ಕರ್-ಪಾಕಿಸ್ತಾ ಭಾರತದ ದೊಡ್ಡ ಶತ್ರು: ಸಮೀಕ್ಷೆ (Pakistan | LeT | Washington | Indian | Mumbai attacks,)
Bookmark and Share Feedback Print
 
ಲಷ್ಕರ್ ಇ ತೊಯ್ಬಾ ಮತ್ತು ಪಾಕಿಸ್ತಾನ ಭಾರತಕ್ಕೆ ಅತೀ ದೊಡ್ಡ ಶತ್ರುವಾಗಿದೆ ಎಂದು ಬಹುತೇಕ ಭಾರತೀಯರು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಸಮೀಕ್ಷೆಯೊಂದು ತಿಳಿಸಿದೆ.

ಅಮೆರಿಕದ ಪೆವ್ ರಿಸರ್ಚ್ ಸೆಂಟರ್ ನಡೆಸಿರುವ ಸಮೀಕ್ಷೆ ಪ್ರಕಾರ, ಮುಂಬೈ ದಾಳಿಗೆ ಲಷ್ಕರ್ ಇ ತೊಯ್ಬಾ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಲಷ್ಕರ್ ಹಾಗೂ ಪಾಕಿಸ್ತಾನ ಭಾರತಕ್ಕೆ ದೊಡ್ಡ ಅಪಾಯಕಾರಿಯಾಗಿ ಪರಿಣಮಿಸಿವೆ ಎಂಬುದು ಭಾರತೀಯರ ಅಭಿಪ್ರಾಯವಾಗಿದೆ.

ಲಷ್ಕರ್ ಮತ್ತು ಪಾಕಿಸ್ತಾನ ನಿಕಟ ಸಂಬಂಧ ಹೊಂದಿರುವ ಬಗ್ಗೆಯೂ ಭಾರತೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸರಕಾರ ಲಷ್ಕರ್ ಇ ತೊಯ್ಬಾಕ್ಕೆ ನೇರವಾಗಿಯೇ ಬೆಂಬಲ ನೀಡುತ್ತಿದೆ ಎಂದು ಶೇ.58ರಷ್ಟು ಮಂದಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ ಲಷ್ಕರ್ ಸೇರಿದಂತೆ ಉಳಿದ ಉಗ್ರಗಾಮಿ ಸಂಘಟನೆಗಳು ಮತ್ತೆ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ. ಅದಕ್ಕೆ ಪಾಕಿಸ್ತಾನ ಕೂಡ ಬೆಂಬಲ ನೀಡುತ್ತಿರುವುದಾಗಿ ದೂರಿರುವುದಾಗಿ ಸಮೀಕ್ಷೆ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ