ಭಾರತದ ಶ್ರೀ, ಶ್ರೀ ರವಿಶಂಕರ್ ಚೀನಾದಲ್ಲಿ ತಮ್ಮ ಆರ್ಟ್ ಆಫ್ ಲಿವಿಂಗ್ ಅನ್ನು ಉದ್ಘಾಟಿಸುತ್ತಿದ್ದು, ಇದಕ್ಕೆ ಚೀನಾ ಪೂರ್ಣ ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ.
ಚೀನಾದ ಬೀಜಿಂಗ್ನಲ್ಲಿ ಆರ್ಟ್ ಆಫ್ ಲಿವಿಂಗ್ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಶ್ರೀ ಶ್ರೀ ಅಕ್ಟೋಬರ್ 24ರಿಂದ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಂಘಟಕರು ವಿವರಿಸಿದ್ದಾರೆ.
ಆ ನಿಟ್ಟಿನಲ್ಲಿ ಚೀನಾಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಧಾರ್ಮಿಕ ಗುರುವಾಗಿದ್ದಾರೆ. ಜಗತ್ತಿನ 140 ದೇಶಗಳಲ್ಲಿ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ನ ಶಾಖೆ ಹೊಂದಿದೆ. ಆರ್ಟ್ ಆಫ್ ಲಿವಿಂಗ್ನಲ್ಲಿ ಸತ್ಸಂಗ(ಧಾರ್ಮಿಕ ಕೂಟ)ದ ಮೂಲಕ ಆಂತರಿಕ ಶಾಂತಿ ಸೇರಿದಂತೆ ಧಾರ್ಮಿಕ ನೀತಿ ಬೋಧೆ ಮಾಡಲಾಗುತ್ತದೆ.
ಅಲ್ಲದೇ, ಅಕ್ಟೋಬರ್ 24ರಂದು ಬೀಜಿಂಗ್ನಲ್ಲಿ ಶ್ರೀ ಶ್ರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 25ರಂದು ಯೋಗ ತರಬೇತಿ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.