ಇಸ್ಲಾಮಾಬಾದ್, ಶುಕ್ರವಾರ, 22 ಅಕ್ಟೋಬರ್ 2010( 17:57 IST )
ಭ್ರಷ್ಟಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐವರು ನ್ಯಾಯಾಧೀಶರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಭ್ರಷ್ಟಾಚಾರದ ಆರೋಪದಲ್ಲಿ ಇಬ್ಬರು ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಮೂವರು ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಮೂರು ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಡಾನ್ ಪತ್ರಿಕೆಯ ವರದಿ ಹೇಳಿದೆ.
ಪೇಶಾವರ ಹೈಕೋರ್ಟ್ ರಿಜಿಸ್ಟ್ರಾರ್ ನ್ಯಾ.ಮಿಫ್ತುದ್ದೀನ್ ಖಾನ್ ಅವರು ಐವರು ನ್ಯಾಯಾಧೀಶರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ವರದಿ ವಿವರಿಸಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಫಾಯ್ಯಾಜುಲ್ಲಾ ಖಾನ್, ಶಾಹಿದ್ ನಾಸೀಮ್ ಖಾನ್ ಹಾಗೂ ಜಿಲ್ಲಾ ಹೆಚ್ಚುವರಿ, ಸೆಷನ್ಸ್ ನ್ಯಾಯಾಧೀಶರಾದ ಸೈಯದ್ ಅಸ್ಗರ್ ಶಾ, ಫಕೀರುರ್ ರೆಹಮಾನ್ ಜಾಡೂನ್, ಸಾಜ್ಜಾದ್ ಅನ್ವರ್ ಅಮಾನತುಗೊಂಡಿದ್ದಾರೆ.