ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಟಲಿ: ಮಿನಿಸ್ಕರ್ಟ್ ತೊಟ್ಟರೆ,ಎದೆಭಾಗ ತೋರಿಸಿದ್ರೆ ದಂಡ! (miniskirts | London | Italian town | cleavage | Castellammare)
Bookmark and Share Feedback Print
 
ಮಿನಿ ಸ್ಕರ್ಟ್ ಧರಿಸುವುದಾಗಲಿ ಅಥವಾ ಎದೆಭಾಗವನ್ನು (ಸ್ತನಭಾಗ ತೋರುವಂತೆ) ಪ್ರದರ್ಶಿಸುವ ರೀತಿಯಲ್ಲಿ ಬಟ್ಟೆ ತೊಟ್ಟರೆ ಮಹಿಳೆಯರಿಗೆ ದಂಡ ವಿಧಿಸಲು ಇಟಲಿಯ ಪುಟ್ಟ ನಗರದ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಒಂದು ವೇಳೆ ಮಹಿಳೆಯರು, ಯುವತಿಯರು ಗೌರವಯುತವಾದ ಬಟ್ಟೆ ಧರಿಸದೆ ಇದ್ದಲ್ಲಿ ಸುಮಾರು 500 ಯುರೋ(695 ಡಾಲರ್‌) ದಂಡ ವಿಧಿಸುವ ನೂತನ ಕಾನೂನನ್ನು ಇಟಲಿ ನಗರ ಜಾರಿಗೆ ತಂದಿದೆ ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಹೇಳಿದೆ.

ಇಟಲಿಯ ನಾಪೆಲ್ಸ್ ಸಮೀಪದ ಕಾಸ್ಟೆಲ್ಲಾಮ್ಮಾರೆ ಡಿ ಸ್ಟಾಬೀಯಾದ ಪುಟ್ಟ ನಗರದಲ್ಲಿ ಮಹಿಳೆಯರು ಉದ್ರೇಕಕಾರಿಯಾಗುವಂತಹ ರೀತಿಯಲ್ಲಿ ಉಡುಪು ಧರಿಸುವುದಕ್ಕೆ ನಿಷೇಧ ಹೇರಿದೆ. ಅಷ್ಟೇ ಅಲ್ಲ ಪುರುಷರು ಮತ್ತು ಮಹಿಳೆಯರು ಕೂಡ ಸೊಂಟದವರೆಗೆ ಮಾತ್ರ ಧರಿಸುವ ಜೀನ್ಸ್ ಅನ್ನು ಕೂಡ ನಿಷೇಧಿಸಲು ನಗರಾಡಳಿತ ಮುಂದಾಗಿದೆ. ಆ ನಿಟ್ಟಿನಲ್ಲಿ ಸುಮಾರು 41 ಹೊಸ ಕಾನೂನುನನ್ನು ಜಾರಿಗೆ ತರಲು ನಿರ್ಧರಿಸಿದೆ. ಇದನ್ನು ಪ್ರತಿಯೊಬ್ಬ ನಾಗರಿಕರೂ ಗೌರವಿಸಬೇಕು ಎಂದು ನಗರಾಡಳಿತ ತಿಳಿಸಿರುವುದಾಗಿ ವರದಿ ವಿವರಿಸಿದೆ.

ನಗರದಲ್ಲಿ ರೌಡಿಸಂ, ಅನಾಗರಿಕವಾಗಿ ವರ್ತಿಸುವುದಕ್ಕೆ ಕಡಿವಾಣ ಹಾಕುವ ನೆಲೆಯಲ್ಲಿ ನಗರಾಡಳಿತ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೇಯರ್ ಲುಯಿಗಿ ಬೋಬ್ಬಿಯೋ ತಿಳಿಸಿದ್ದಾರೆ.

ಅದೇ ರೀತಿ ಪಾರ್ಕ್ಸ್ ಮತ್ತು ಉದ್ಯಾನವನಗಳಲ್ಲಿ ಫುಟ್‌ಬಾಲ್ ಆಡುವುದನ್ನು ಕೂಡ ನಿಷೇಧಿಸಲು ಮುಂದಾಗಿರುವ ನಗರಾಡಳಿತ ಈ ಬಗ್ಗೆ ಸೋಮವಾರ ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಗ್ರೀನ್ ಸಿಗ್ನಲ್ ಪಡೆಯಲು ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ