ಪಾಶ್ಚಿಮಾತ್ಯ ದೇಶಗಳ ಮೇಲೆ ಯಾವುದೇ ಮುಲಾಜಿಲ್ಲದೆ ದಾಳಿ ನಡೆಸಬೇಕೆಂದು ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ಅಮೆರಿಕದ ವಕ್ತಾರ ಅಡಾಮ್ ಗಾಡಾನ್ ಮುಸ್ಲಿಮ್ ಬಾಂಧವರಿಗೆ ಬಹಿರಂಗವಾಗಿ ಕರೆ ನೀಡಿರುವುದಾಗಿ ಎಸ್ಐಟಿಇ ಇಂಟೆಲಿಜೆನ್ಸ್ ಗ್ರೂಪ್ ಶನಿವಾರ ತಿಳಿಸಿದೆ.
ಧರ್ಮಯುದ್ಧ ಸಾರುವ ಮೂಲಕ ನನ್ನ ಮುಸ್ಲಿಮ್ ಸಹೋದರರು ವಾಸವಾಗಿರುವ ಇಸ್ಲಾಮ್ ಧರ್ಮವಿರೋಧಿ ದೇಶಗಳ ಮೇಲೆ ದಾಳಿ ಮಾಡಬೇಕು. ಇದು ನಿಮ್ಮ ಒಳಿತಿಗಾಗಿ ಮಾಡುವ ಕರ್ವವ್ಯವಾಗಿದೆ ಎಂದು ಗಾಡಾನ್ ವೀಡಿಯೋವೊಂದರಲ್ಲಿ ಕರೆ ನೀಡಿರುವುದಾಗಿ ಅಮೆರಿಕದ ಮಾನಿಟರಿಂಗ್ ಗ್ರೂಪ್ ವಿವರಿಸಿದೆ.
ಜಿಹಾದ್ ಮೂಲಕ ಪಾಶ್ಚಿಮಾತ್ಯ ದೇಶಗಳ ಮೇಲೆ ದಾಳಿ ನಡೆಸಲು ಮುಸ್ಲಿಮ್ ನಾಯಕರು ಈ ಸದಾವಕಾಶವನ್ನು ಬಳಸಿಕೊಂಡು ದಾಳಿ ನಡೆಸಬೇಕು ಎಂದು ಒತ್ತಾಯಿಸಿದ್ದಾನೆ.
ಗಾಡಾನ್ ಅಲಿಯಾಸ್ ಅಜಾಮ್ 1978ರಲ್ಲಿ ಜನಿಸಿದ ಈತ ದಕ್ಷಿಣ ಕ್ಯಾಲಿಫೋರ್ನಿಯಾದ ನಿವಾಸಿಯಾಗಿದ್ದಾನೆ. 2004ರಿಂದ ಈತ ಇಂತಹ ಉದ್ರೇಕಕಾರಿ ಕರೆಯ ಹೇಳಿಕೆಯನ್ನು ವೀಡಿಯೋ ಟೇಪ್ಗಳ ಮೂಲಕ ಕೊಟ್ಟಿದ್ದ.