ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಂತರಿಕ್ಷ ವಿಸ್ಮಯ; ಬೃಹತ್ ಗ್ರಹಕ್ಕೆ ಎರಡು ಸೂರ್ಯ! (Sun | Sciencetist | America | Star)
Bookmark and Share Feedback Print
 
ನಭೋಮಂಡಲದಲ್ಲಿನ ಒಂದೊಂದೇ ವಿಸ್ಮಯಗಳು ಹೊರಬೀಳುತ್ತಿದೆ, ಅದರಂತೆ ಎರಡು ಸೂರ್ಯನ ಸುತ್ತ ಗಿರಕಿ ಹೊಡೆಯುತ್ತಿರುವ ಗ್ರಹವೊಂದನ್ನು ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ವಾಸ್ತವ ಬಾಹ್ಯಾಕಾಶದಲ್ಲಿ ಎರಡು ಸೂರ್ಯರ ಸುತ್ತ ಸುತ್ತುತ್ತಿರುವ ಗ್ರಹಗಳು ಸಾಕಷ್ಟಿವೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರಜ್ಞರ ತಂಡ ಪತ್ತೆ ಹಚ್ಚಿರುವ ದೈತ್ಯಕಾಯದ ಈ ಅನಿಲ ಕಾಯ ಎಚ್ಆರ್ 7162 ಎಂಬ ತಾರೆಯ(ಸೂರ್ಯನ) ಸುತ್ತ ಮಾತ್ರವಲ್ಲದೆ 49 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಲೈರಾ ನಕ್ಷತ್ರ ಪುಂಜದಲ್ಲಿನ ಮತ್ತೊಂದು ತಾರೆಯ ಸುತ್ತಲೂ ಗಿರಕಿ ಹಾಕುತ್ತಿದೆ ಎಂದು ವಿವರಿಸಿದ್ದಾರೆ.

ಹಲವಾರು ಅವಧಿಯವರೆಗೆ ನಕ್ಷತ್ರದ ಚಲನವಲನವನ್ನು ಗಮನಿಸಿ ಆಧರಿಸಿ ನಡೆಸಲಾಗುವ ಆಸ್ಟ್ರೋಮೆಟ್ರಿ ಎಂಬ ಅಧ್ಯಯನ ವಿಧಾನವನ್ನು ಆಧರಿಸಿ ಈ ಹೊಸ ಗ್ರಹವನ್ನು ಪತ್ತೆ ಮಾಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಂತರಿಕ್ಷದಲ್ಲಿ ಹೀಗೆ ಎರಡೆರಡು ಸೂರ್ಯರನ್ನು ಹೊಂದಿದ ಕನಿಷ್ಠ 12 ಗ್ರಹಗಳು ಪತ್ರೆಯಾಗಿವೆ. ಈ ಗ್ರಹಗಳಲ್ಲಿ, ಸ್ಟಾರ್ ವಾರ್ಸ್ ಚಿತ್ರದಲ್ಲಿ ತೋರಿಸುವಂತೆ ಎರಡೆರಡು ಬಾರಿ ಸೂರ್ಯಾಸ್ತಮಾನ ಸಂಭವಿಸಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ