ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರೆಹಮಾನ್ ಮಲಿಕ್ ಆಪ್ತ ಅಧಿಕಾರಿಗೆ ಪಾಕ್ ಪ್ರಧಾನಿ ಕೊಕ್ (Rehman Malik| interior minister | Yousuf Raza Gilani | PM sacks key aide)
ಇಸ್ಲಾಮಾಬಾದ್, ಸೋಮವಾರ, 25 ಅಕ್ಟೋಬರ್ 2010( 17:55 IST )
ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರ ಆಪ್ತ ಅಧಿಕಾರಿಯೊಬ್ಬನನ್ನು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ವಜಾಗೊಳಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಕಳೆದ ವರ್ಷ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ಪಾಕ್ ಸುಪ್ರೀಂಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. ಆ ನಿಟ್ಟಿನಲ್ಲಿ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಆಂತರಿಕ ಸಚಿವಾಲಯದ ಅಧಿಕಾರಿ ಸಾಜ್ಜಾದ್ ಹೈದರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ರೆಹಮಾನ್ ಮಲಿಕ್ ಅವರ ಆಪ್ತರಾಗಿದ್ದ ಹೈದರ್ ಅವರನ್ನು ಹುದ್ದೆಯಿಂದ ಪ್ರಧಾನಿ ಅವರು ವಜಾಗೊಳಿಸಿರುವುದನ್ನು ಪ್ರಧಾನಿ ಕಚೇರಿ ಮೂಲಗಳು ಖಚಿತಪಡಿಸಿವೆ.