ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಹಸ್ಯ ಬಯಲು; ವಿಕಿಲೀಕ್ಸ್‌ ಜುಲಿಯನ್‌ಗೆ ಪ್ರಾಣಭೀತಿ! (WikiLeaks | Julian Assange | US military | Jerusalem)
Bookmark and Share Feedback Print
 
ಇರಾಕ್ ಯುದ್ದಕ್ಕೆ ಸಂಬಂಧಿಸಿದ ನಾಲ್ಕು ಲಕ್ಷ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿ, ಅಮೆರಿಕದ ನಿದ್ದೆಗೆಡಿಸಿದ್ದ ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಾಂಜ್ ಈಗ ಜೀವಭಯ ಎದುರಿಸುತ್ತಿದ್ದಾರೆ.

ರಹಸ್ಯ ದಾಖಲೆ ಬಹಿರಂಗದಿಂದಾಗಿ ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಸೆರೆಹಿಡಿಯಬಹುದು. ಈ ಸತ್ಯವನ್ನು ಅರಿತಿರುವ ಅಸ್ಸಾಂಜ್ ಭಯಭೀತಿಯಲ್ಲೇ ಜೀವನ ನಡೆಸುವಂತಾಗಿದೆ.

ಅಸ್ಸಾಂಜ್ ಎಲ್ಲಿ, ಹೇಗಿದ್ದಾರೆ?ಬಂಧನದ ಭೀತಿಯಲ್ಲಿರುವ ಅಸ್ಸಾಂಜ್ ಈಗ ನಿರ್ದಿಷ್ಟ ಪ್ರದೇಶದಲ್ಲಿ ಜೀವಿಸುತ್ತಿಲ್ಲ. ಬದಲಾಗಿ ದಿನಕ್ಕೊಂದು ರೆಸ್ಟೋರೆಂಟ್‌ನಲ್ಲಿ ಸುಳ್ಳು ಹೆಸರನ್ನು ನೀಡಿ ತಂಗುತ್ತಿದ್ದಾರೆ. ತನ್ನ ಕೂದಲಿಗೆ ಡೈ ಹಚ್ಚುತ್ತಿದ್ದಾರೆ. ಸರಿಯಾಗಿ ಕೋಣೆಯಲ್ಲಿ ಮಲಗದೆ, ಸೋಫಾ, ಮಹಡಿಗಳಲ್ಲಿ ನಿದ್ರಿಸುತ್ತಿದ್ದಾರೆ.

ಎಲ್ಲ ಕಡೆ ಕ್ರೆಡಿಟ್ ಕಾರ್ಡ್ ಬದಲಿಗೆ ನಗದು ನೀಡಿ ವ್ಯವಹರಿಸುತ್ತಾರೆ. ಕೆಲವೊಮ್ಮೆ ಹಣಕ್ಕಾಗಿ ಗೆಳೆಯರ ಮೊರೆ ಹೋದದ್ದು ಇದೆ. ಒಟ್ಟಾರೆ ಇರಾಕ್ ಯುದ್ಧದಲ್ಲಿ ಅಮೆರಿಕ ಸೇನೆ ನಡೆಸಿದ ಪಾತಕತನವನ್ನು ಹೊರಹಾಕಿರುವುದು ಅಸ್ಸಾಂಜ್‌ಗೆ ಜೀವಭಯ ಎದುರಿಸುವಂತಾಗಿದೆ.

ಮತ್ತೊಂದೆಡೆ ಅಸ್ಸಾಂಜ್ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಸ್ವೀಡನ್‌ನ ಇಬ್ಬರು ಮಹಿಳೆಯರು ಅಸ್ಸಾಂಜ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಆದರೆ, ಇದು ಅಮೆರಿಕ ನನ್ನನ್ನು ಸಿಕ್ಕಿಹಾಕಿಸಲು ಹೂಡಿರುವ ಸುಳ್ಳು ಆರೋಪ ಎಂದು ತಿರುಗೇಟು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ