ಶಸ್ತ್ರ ಸಜ್ಜಿತ ನಾಲ್ವರು ಬಂದೂಕುಧಾರಿಗಳು ಡಚ್ ಕಾರ್ಯಕರ್ತ ಹಾಗೂ ಆತನ ಕಾರಿನ ಚಾಲಕನನ್ನು ಉತ್ತರ ಅಫ್ಘಾನಿಸ್ತಾನದಲ್ಲಿ ಅಪಹರಿಸಿರುವ ಘಟನೆ ನಡೆದಿರುವುದಾಗಿ ಸ್ಥಳೀಯ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಟಾಖಾರ್ ಪ್ರಾಂತ್ಯದಲ್ಲಿ ನಾಲ್ವರು ಇಬ್ಬರನ್ನೂ ಕಾರಿನಿಂದ ಹೊರಗೆಳೆದು ಅಪಹರಿಸಿಕೊಂಡು ಹೋಗಿರುವುದಾಗಿ ರಾಜ್ಯಪಾಲ ಅಬ್ದುಲ್ ಜಾಬಾರ್ ವಿವರಿಸಿದ್ದಾರೆ.