ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫ್ರಾನ್ಸ್: ಮುಷ್ಕರದಿಂದ ಪ್ರತಿದಿನ 4 ಸಾವಿರ ಕೋಟಿ ನಷ್ಟ (France | strikes | oil refineries | Nicolas Sarkozy | Marseille,)
Bookmark and Share Feedback Print
 
ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ತೈಲ ಶುದ್ದೀಕರಣ ಕಾರ್ಖಾನೆಯ ನೌಕರರು ಸೋಮವಾರವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಪ್ರತಿದಿನ ದೇಶಕ್ಕೆ 400 ಮಿಲಿಯನ್ (ಸುಮಾರು 4ಸಾವಿರ ಕೋಟಿ) ಆರ್ಥಿಕ ಹೊಡೆತ ಬೀಳುತ್ತಿರುವುದಾಗಿ ಫ್ರಾನ್ಸ್ ವಿತ್ತ ಸಚಿವರು ತಿಳಿಸಿದ್ದಾರೆ.

ಫ್ರಾನ್ಸ್‌ನಾದ್ಯಂತ 12 ತೈಲ ಶುದ್ದೀಕರಣ ಘಟಕ ಕಳೆದ ಎರಡು ವಾರಗಳಿಂದ ಬಂದ್ ಮಾಡುವ ಮೂಲಕ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಫ್ರಾನ್ಸ್ ಸರಕಾರದ ಧೋರಣೆ ಖಂಡಿಸಿ ದೇಶಾದ್ಯಂತ ಮುಷ್ಕರ ನಡೆಯುತ್ತಿದೆ.

ಬಂದ್‌ನಿಂದಾಗಿ ಕಸದ ರಾಶಿ ಮತ್ತು ಗ್ಯಾಸ್ ವಿಲೇವಾರಿ ಜನರಿಗೆ ಸಮರ್ಪಕವಾಗಿ ಆಗದೆ ಇರುವುದು ದೊಡ್ಡ ತಲೆನೋವು ತಂದೊಡ್ಡಿದೆ. ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತೈಲ ಸಂಸ್ಕರಣ ಘಟಕ ನೌಕರರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ