ಇರಾನ್ನಿಂದ ಹಣ ಪಡೆದದ್ದು ಹೌದು-ಅಫ್ಘಾನ್:ಅಮೆರಿಕಕ್ಕೆ ತಲೆನೋವು
ವಾಷಿಂಗ್ಟನ್, ಬುಧವಾರ, 27 ಅಕ್ಟೋಬರ್ 2010( 11:24 IST )
ಇರಾನ್ನಿಂದ ತಾವು ಚೀಲಗಟ್ಟಲೆ ಹಣವನ್ನು ಪಡೆದಿರುವುದಾಗಿ ಅಫ್ಘಾನಿಸ್ತಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಬಹಿರಂಗವಾಗಿಯೇ ಘೋಷಿಸುವ ಮೂಲಕ ಈಗ ಅಮೆರಿಕಕ್ಕೆ ಕಸಿವಿಸಿ ಉಂಟಾಗಿದೆ.
ಆದರೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನ್ನ ನೆರೆ ರಾಷ್ಟ್ರಗಳೊಂದಿಗೆ ಅಸ್ಥಿರ ಪಾತ್ರ ವಹಿಸಿದ ಇತಿಹಾಸ ಹೊಂದಿರುವ ಇರಾನ್, ಅಫ್ಘಾನ್ಗೆ ನೆರವು ನೀಡಿರುವುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದೆ.
ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನೀಡಿದ ಇರಾನ್ ಹಕ್ಕಿನ ಬಗ್ಗೆ ತಾನು ಪ್ರಶ್ನಿಸುವುದಿಲ್ಲ. ಜತೆಗೆ ಇರಾನ್ ನೆರವು ಪಡೆದ ಅಫ್ಘಾನ್ ಬಗ್ಗೆಯೂ ತಾವು ಟೀಕಿಸುವುದಿಲ್ಲ. ಅಫ್ಘಾನಿಸ್ತಾನಕ್ಕೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದೆ.