ಇಸ್ಲಾಮಾಬಾದ್, ಬುಧವಾರ, 27 ಅಕ್ಟೋಬರ್ 2010( 14:51 IST )
ಬರ್ಲಿನ್ ಮೂಲಕ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ನಡೆಸಿದ ಭ್ರಷ್ಟಾಚಾರ ಮಟ್ಟ ಸೂಚ್ಯಂಕ ಪಟ್ಟಿಯಲ್ಲಿ ಪಾಕಿಸ್ತಾನ 34ನೇ ಸ್ಥಾನ ಪಡೆದಿದೆ. 2009ರಲ್ಲಿ ಪಾಕ್ 42ನೇ ಸ್ಥಾನ ಪಡೆದಿತ್ತು.
ಸಂಸ್ಥೆಯ ಪ್ರಾಮಾಣಿಕತೆಗೆ ಗರಿಷ್ಠ 10 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಇದರಲ್ಲಿ ಪಾಕಿಸ್ತಾನ 2.3ರಷ್ಟು ಅಂಕ ಗಳಿಸಿದೆ. ಈ ಬಾರಿ 178 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 2009ರಲ್ಲಿ 180 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಪಾಕಿಸ್ತಾನ 10ರಲ್ಲಿ 2.8ಅಂಕ ಪಡೆದು 42ನೇ ಸ್ಥಾನ ಪಡೆದಿತ್ತು.
ಫೆಡರಲ್ ಗವರ್ನ್‌ಮೆಂಟ್‌ನ ವಿವಿಧ ಡಿಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 300 ಬಿಲಿಯನ್‌ನಷ್ಟು ಭ್ರಷ್ಟಾಚಾರ ಕಳೆದ ಒಂದು ವರ್ಷದಲ್ಲಿ ನಡೆದಿರುವುದಾಗಿ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನ್ ಪಾಕಿಸ್ತಾನ (ಟಿಐಪಿ) ಆರೋಪಿಸಿದೆ. ಹಾಗಾಗಿ ಪಾಕಿಸ್ತಾನ ಈ ಬಾರಿಯೂ ಭ್ರಷ್ಟಾಚಾರ ಸೂಚ್ಯಂಕ ಪಟ್ಟಿಯಲ್ಲಿ 34ನೇ ಸ್ಥಾನಕ್ಕೆ ಕುಸಿಯಲು ಕಾರಣವಾಗಿದೆ ಎಂದು ಪಿಐಟಿ ತಿಳಿಸಿದೆ.