ಇಸ್ಲಾಮಾಬಾದ್, ಬುಧವಾರ, 27 ಅಕ್ಟೋಬರ್ 2010( 18:11 IST )
ಬಲೂಚಿಸ್ತಾನದಲ್ಲಿ ನಡೆದ ಹಿಂಸಾಚಾರದಲ್ಲಿ 40ಕ್ಕೂ ಅಧಿಕ ರಾಜಕೀಯ ಮುಖಂಡರನ್ನು ಕೊಲೆಗೈದಿರುವ ಪ್ರಕರಣವನ್ನು ಪಾಕಿಸ್ತಾನ ತನಿಖೆ ನಡೆಸಬೇಕೆಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಗ್ರೂಪ್ ಕರೆ ನೀಡಿದೆ.
ಈ ಘಟನೆ ಸುಮಾರು ನಾಲ್ಕು ತಿಂಗಳ ಕಾಲ ರಾಜಕೀಯ ಅಸ್ಥಿರತೆಗೆ ಕಾರಣವಾಗಿತ್ತು. ಅಲ್ಲದೇ ಈ ಹಿಂಸಾಚಾರ ಭಾರೀ ಸಾವು ನೋವುಗಳಿಗೂ ಕಾರಣವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಈ ಪ್ರಕರಣದ ಕುರಿತು ಪಾಕ್ ತನಿಖೆ ನಡೆಸಬೇಕೆಂದು ಅಮ್ನೆಸ್ಟಿ ಒತ್ತಾಯಿಸಿದೆ.
ಈ ಪ್ರಾಂತ್ಯದಲ್ಲಿ ಅನಾವಶ್ಯಕವಾಗಿ ಜನರನ್ನು ಹತ್ಯೆಗೈಯುವ ಪ್ರವೃತ್ತಿ ಹೆಚ್ಚುತ್ತಿರುವುದಾಗಿಯೂ ಬಲೂಚಿಸ್ತಾನ್ ಮಾನವ ಹಕ್ಕು ಸಂಘಟನೆ ಗಂಭೀರವಾಗಿ ಆರೋಪಿಸಿತ್ತು. ಆ ನಿಟ್ಟಿನಲ್ಲಿ ಪಾಕ್ ಸರಕಾರ ಕೂಡಲೇ ಕ್ರಮ ಕೈಗೊಂಡು, ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಏಶ್ಯಾ ಫೆಸಿಪಿಕ್ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ನಿರ್ದೇಶಕ ಸ್ಯಾಮ್ ಜಾರಿಫಿ ತಿಳಿಸಿದ್ದಾರೆ.