ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್ ಭೇಟಿ ವಿರೋಧಿಸಿ ಉಕ್ರೇನ್‌ನಲ್ಲಿ ಮಹಿಳೆಯರು ಟಾಪ್‌ಲೆಸ್ ಆಗುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಉಕ್ರೇನ್‌ನ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ರಷ್ಯಾ ತಂತ್ರ ನಡೆಸಿದೆ. ಹಾಗಾಗಿ ಪುಟಿನ್ ಇಲ್ಲಿಗೆ ಭೇಟಿ ನೀಡುವುದು ಬೇಡ ಎಂಬುದು ಈ ಮಹಿಳಾ ಹಕ್ಕು ಹೋರಾಟಗಾರರ ವಿರೋಧ. ಅದಕ್ಕಾಗಿಯೇ ಅವರು ಈ ರೀತಿ ಅರೆನಗ್ನರಾಗಿ ಬೀದಿಗಿಳಿದಿದ್ದಾರೆ.
ಇದು ಇವರಿಗೇನೂ ಹೊಸತಲ್ಲ. ಉಕ್ರೇನ್ ಸಂಸತ್ತಿನಲ್ಲಿ ಎಲ್ಲಾ ಪುರುಷ ಸದಸ್ಯರನ್ನು ನೇಮಿಸಿಕೊಂಡಿದ್ದನ್ನು ವಿರೋಧಿಸಿ ಕಳೆದ ಮಾರ್ಚ್ ತಿಂಗಳಲ್ಲೂ ಇವರು ಈ ರೀತಿ ಟಾಪ್ ಲೆಸ್ ಆಗಿದ್ದರು. ಒಟ್ಟಾರೆ ವಿಭಿನ್ನ ರೀತಿಯ ಪ್ರತಿಭಟನೆ ಪುಕ್ಕಟೆ ಮನರಂಜನೆ ನೀಡಿದಂತಾಯಿತು!