ಆಸ್ತಿ ವಿವಾದಕ್ಕಾಗಿ, ಅನೈತಿಕ ಸಂಬಂಧ, ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಯುವ ವಿಷಯ ಕೇಳಿದ್ದೀರಿ. ಆದರೆ ತನ್ನ ಕತ್ತೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದನ್ನು ಕಣ್ಣಾರೆ ಕಂಡ ಪೋರ್ಚುಗಲ್‌ನ ರೈತನೊಬ್ಬ 68ರ ಹರೆಯದ ಕಾಮುಕನ ಗಂಟಲು ಸೀಳಿ ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
'ತನ್ನ ಪ್ರೀತಿಪಾತ್ರವಾದ ರುಸ್ಸೋ ಹೆಸರಿನ ಕತ್ತೆಯ ಜೊತೆ ಜೈಮೆ ಪಿರೆಸ್ (68) ಲೈಂಗಿಕ ಚಟುವಟಿಕೆಯನ್ನು ನಡೆಸುತ್ತಿದ್ದ ದೃಶ್ಯವನ್ನು ಪ್ರತ್ಯಕ್ಷವಾಗಿ ಕಂಡ ರೈತ ಜೋಸೆ ಗೋಮೆಸ್ ಪಿಂಟೋ (55) ತನ್ನಲ್ಲಿದ್ದ ಹರಿತವಾದ ರೇಜರ್‌ನಿಂದ ಪಿರೆಸ್‌ನ ಗಂಟಲು ಸೀಳಿ ಕೊಲೆ ಮಾಡಿದ್ದ.
ಪಿರೆಸ್‌ನ ರಕ್ತಸಿಕ್ತವಾದ ಮೃತದೇಹ ಪೋರ್ಚುಗಲ್ಸ್‌ನ ಪ್ರೋಯೆಂಕಾ ಎ ವೆಲ್‌ಹಾ ಗ್ರಾಮದ ಕೊಳದ ಸಮೀಪ ಬಿದ್ದಿರುವುದಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ. ಪಿರೆಸ್ ಫಾರ್ಮ್‌ಗಳಲ್ಲಿರುವ ಪ್ರಾಣಿಗಳ ಜೊತೆ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎಂಬುದಾಗಿ ವರದಿ ವಿವರಿಸಿದೆ.
ಆದರೆ ಇದೊಂದು ತುಂಬಾ ಕೆಟ್ಟ ಮತ್ತು ವಿಷಾದಕರ ಘಟನೆ ಎಂದು ಮೇಯರ್ ಫ್ರಾನ್ಸಿಸ್ಕೋ ಸಿಲ್ವ ತಿಳಿಸಿದ್ದಾರೆ. ಏತನ್ಮಧ್ಯೆ, ಪಿಂಟೋ ತಾನು ಕೊಲೆಗಾರನಲ್ಲ ಎಂದು ಕೋರ್ಟ್ ವಿಚಾರಣೆ ವೇಳೆಯಲ್ಲಿ ಅಲವತ್ತುಕೊಂಡಿದ್ದಾನೆ.