ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ವಿದ್ಯಾರ್ಥಿನಿ ಅಲೆಕ್ಸಾಂಡ್ರಿಯಾಗೆ ಮಿಸ್ ವರ್ಲ್ಡ್ ಗರಿ (Miss US | Miss World 2010 | China | India)
Bookmark and Share Feedback Print
 
ಇಲ್ಲಿ ನಡೆದ 60ನೇ ಪ್ರತಿಷ್ಠಿತ ಮಿಸ್ ವರ್ಲ್ಡ್ ಕಿರೀಟವನ್ನು 18ರ ಚೆಲುವೆ ಅಮೆರಿಕಾ ವಿದ್ಯಾರ್ಥಿನಿ ಅಲೆಕ್ಸಾಂಡ್ರಿಯಾ ಮಿಲ್ಸ್ ಮುಡಿಗೇರಿಸಿಕೊಂಡಿದ್ದಾರೆ. 119 ಸುಂದರಿಯನ್ನು ಹಿಂದಿಕ್ಕಿದ ಈ ಹೈಸ್ಕೂಲ್ ವಿದ್ಯಾರ್ಥಿನಿ ಎಲ್ಲರ ಗಮನ ಸೆಳೆದಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಭಾರತದ ಸುಂದರಿ ಮಾನಸ್ವಿ ಮಾಮ್‌ಗೈ ಅಗ್ರ 20ರ ಪಟ್ಟಿಯಲ್ಲೂ ಕಾಣಿಸಿಕೊಳ್ಳುವಲ್ಲಿ ವಿಫಲರಾಗುವ ಮೂಲಕ ನಿರಾಸೆ ಮೂಡಿಸಿದರು.

ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಬೋಟ್ಸ್‌ವಾನಾದ ಎಮ್ಮಾ ವಾರೆಸ್‌ ಮತ್ತು ವೆನೆಜ್ವಾಲಾದ ಮಿಸ್ ಆಡ್ರಿಯಾನಾ ವಾಸಿನಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡರು. ಅದೇ ಹೊತ್ತಿಗೆ ಆತಿಥೇಯ ಚೀನಾದ ಚೆಲುವೆ ಟಾಂಗ್ ಜಿಯೊ ಅಗ್ರ 5ರಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗಷ್ಟೇ ಹೈಸ್ಕೂಲ್‌ನಿಂದ ತೇರ್ಗಡೆ ಹೊಂದಿರುವ ಅಲೆಕ್ಸಾಂಡ್ರಿಯಾ ಭವಿಷ್ಯದಲ್ಲಿ ಅಧ್ಯಾಪಿಕೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ