ಬ್ರಿಟನ್ ಮಾಜಿ ಪ್ರಧಾನಮಂತ್ರಿ ಮಾರ್ಗರೆಟ್ ಥ್ಯಾಚರ್ ಜಗತ್ತಿನಲ್ಲಿಯೇ ಅತ್ಯಂತ ಪ್ರಭಾವಶಾಲಿ ಮಹಿಳೆ ಎಂಬುದಾಗಿ ನೂತನ ಸಮೀಕ್ಷೆಯೊಂದು ತಿಳಿಸಿದೆ.
ಮೈಡೈಲಿ ವೆಬ್‌ಸೈಟ್ ಈ ಸಮೀಕ್ಷೆಯನ್ನು ಕೈಗೊಂಡಿದ್ದು, ಮಾರ್ಗರೆಟ್ ಅವರು ಶೇ.32ರಷ್ಟು ಮತಗಳಿಸಿರುವುದಾಗಿ ಹೇಳಿದೆ. ಅದೇ ರೀತಿ ಫ್ಲೊರೆನ್ಸ್ ನೈಂಟಿಂಗೇಲ್, ಮದರ್ ಥೆರೆಸಾ ಹಾಗೂ ಓಫ್ರಾ ವಿನ್‌ಫ್ರೈ ಅವರು ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ದಿ ಮಿರರ್ ಪತ್ರಿಕೆ ವರದಿ ವಿವರಿಸಿದೆ.
ಮಾರ್ಗರೆಟ್ ಥ್ಯಾಚರ್ ಅವರು 1979ರಿಂದ 1990ರವರೆಗೆ ಬ್ರಿಟನ್‌ನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ 1975ರಿಂದ 1990ರವರೆಗೆ ಕನ್ಸರ್‌ವೇಟಿವ್ ಪಕ್ಷದ ಮುಖಂಡರಾಗಿದ್ದರು.
ಈ ಸಮೀಕ್ಷೆಯಲ್ಲಿ ಬ್ರಿಟನ್‌ನ ಸೂಪರ್ ಮಾಡೆಲ್ ಕಾಟೆ ಮೋಸ್ಸ್ ಅವರು ಕೇವಲ ಶೇ.1ರಷ್ಟು ಮತ ಗಳಿಸಿ ಕೊನೆಯ ಸ್ಥಾನ ಪಡೆದಿದ್ದಾರೆ. ದಕ್ಷತೆ, ಹೆಚ್ಚಿನ ಕಾರ್ಯನಿರ್ವಹಣೆ, ಚಾಣಕ್ಷತೆಯ ಅಧಾರದ ಮೇಲೆ ಪ್ರಭಾವಶಾಲಿ ಮಹಿಳೆಯರನ್ನು ಆಯ್ಕೆ ಮಾಡಲು ಈ ಮಾನದಂಡ ಬಳಸಿಕೊಳ್ಳಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.