ಸಂಶೋಧನೆಗಳಿಗೇನೂ ಕೊರತೆಯಿಲ್ಲ, ಸಂಶೋಧನೆ ನಡೆಯುತ್ತಲೇ ಇರುತ್ತದೆ...ಇದೀಗ ಮಾದಕ ದ್ರವ್ಯಗಳಾದ ಹೆರಾಯಿನ್, ಕೊಕೇನ್‌ಗಿಂತ 'ಮದ್ಯ' ತುಂಬಾ ಅಪಾಯಕಾರಿ ಎಂಬುದಾಗಿ ಸಂಶೋಧಕರು ತಿಳಿಸುವ ಮೂಲಕ 'ಮದ್ಯ' ಪ್ರಿಯರಿಗೆ ಅಪ್ರಿಯವಾದ ಸುದ್ದಿಯನ್ನ ಹೇಳಿದಂತಾಗಿದೆ!
ಲಂಡನ್‌ನ ಇಂಪೀರಿಯಲ್ ಕಾಲೇಜಿನ ಡೇವಿಡ್ ನಟ್ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ. ಮದ್ಯ (ಆಲ್ಕೋಹಾಲ್) ಇತರೆಲ್ಲ ಮಾದಕ ವಸ್ತುಗಳಿಗಿಂತ ಅಪಾಯಕಾರಿ ಎಂದು ವಿವರಿಸಿದ್ದಾರೆ.
ಮದ್ಯ ಸೇವಿಸುವ ವ್ಯಕ್ತಿಯ ಕುಟುಂಬ, ಆರೋಗ್ಯ, ಸಾಮಾಜಿಕ ಸ್ಥಾನಮಾನಗಳಲ್ಲಿ ಆಗುವ ದುಷ್ಪರಿಣಾಮ, ಗೆಳೆತನ ನಾಶದ ಜೊತೆಗೆ ಸಾವಿನ ಪ್ರಮಾಣವನ್ನೂ ಗಮಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಶೋಧನಾ ವರದಿ ಹೇಳಿದೆ. ಮದ್ಯದ ನಂತರ ಹೆರಾಯಿನ್, ಕೊಕೇನ್ ಎರಡು ಮತ್ತು ಮೂರನೇ ಅಪಾಯಕಾರಿ ಸ್ಥಾನ ಪಡೆದಿದೆ.
ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನ ಮಾಜಿ ಸಲಹೆಗಾರರಾಗಿದ್ದ ನಟ್ ಅವರು ಈಗ ಸ್ವತಂತ್ರ ವೈಜ್ಞಾನಿಕ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ತುಂಬಾ ಆಳವಾಗಿ ಅಧ್ಯಯನ ನಡೆಸಿದ ನಂತರ ಹೆರಾಯಿನ್, ಕೊಕೇನ್‌ಗಿಂತ ಮಾದಕ ದ್ರವ್ಯ ಆರೋಗ್ಯಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ ಎಂಬುದಕ್ಕೆ ತುಂಬಾ ಪುರಾವೆಗಳು ದೊರೆತಿರುವುದಾಗಿ ಸಂಶೋಧಕರು ತಿಳಿಸಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.