ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ವೈದ್ಯನನ್ನು ಹತ್ಯೆ ಮಾಡಿದ್ದ ಅಲ್ ಖಾಯಿದಾದ ಬಾಲ ಉಗ್ರನಿಗೆ ಟೊರಾಂಟೋದ ನ್ಯಾಯಾಲಯ 40 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಅಲ್ ಖಾಯಿದಾ ಜೊತೆ ಹೋರಾಡುತ್ತಿದ್ದ ಅಮೆರಿಕನ್ ಸೇನೆಯ ವೈದ್ಯನನ್ನು 2002ರಲ್ಲಿ ಅಲ್ ಖಾಯಿದಾ ಜೊತೆ ಸಂಪರ್ಕ ಹೊಂದಿದ್ದ ಬಾಲ ಉಗ್ರ ಒಮರ್ ಖಾದರ್ ಹತ್ಯೆ ಮಾಡಿದ್ದ. ನಂತರ ನಡೆದ ಗುಂಡಿನ ಚಕಮಕಿ ಸಂದರ್ಭದಲ್ಲಿ ಖಾದರ್ನನ್ನು ಬಂಧಿಸಲಾಗಿತ್ತು. ಆಗ ಖಾದರ್ ವಯಸ್ಸು ಕೇವಲ 15.
ಈತನನ್ನು ಬಂಧಿಸಿದ್ದಕ್ಕೆ ಕೆನಡಾದ ಎಡಪಂಥೀಯ ವಲಯದ ಮಾಧ್ಯಮಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಕೋರ್ಟ್ ವಿಚಾರಣೆ ನಂತರ ಆತನಿಗೆ ಜೈಲುಶಿಕ್ಷೆ ವಿಧಿಸಿದೆ.