ಸ್ವಿಸ್ ರಾಯಭಾರ ಕಚೇರಿಯ ಹೊರಭಾಗದಲ್ಲಿ ಬಾಂಬ್ ಸ್ಫೋಟಗೊಂಡಿರುವ ಘಟನೆ ಮಂಗಳವಾರ ಸಂಭವಿಸಿರುವುದಾಗಿ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಬಾಂಬ್ ಸ್ಫೋಟದಲ್ಲಿನ ಸಾವು-ನೋವಿನ ಕುರಿತು ತಿಳಿದುಬಂದಿಲ್ಲ. ಆದರೆ ಬಾಂಬ್ ಸ್ಫೋಟದ ಕುರಿತು ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದು, ಶಂಕಿತ ಪ್ಯಾಕ್‌ವೊಂದನ್ನು ಬಲ್ಗೇರಿಯನ್ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸೋಮವಾರವಷ್ಟೇ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಭಾಷಣ ಮಾಡುತ್ತಿರುವ ಸ್ಥಳಕ್ಕೆ ಪಾರ್ಸೆಲ್ ಬಾಂಬ್ ಅನ್ನು ಕೊಂಡೊಯ್ಯಲು ಯತ್ನಿಸಿದ್ದ ಇಬ್ಬರು ಶಂಕಿತರನ್ನು ಗ್ರೀಕ್ ಪೊಲೀಸರು ಬಂಧಿಸಿದ್ದರು.