ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಡೋನೇಷ್ಯಾ: ಜ್ವಾಲಾಮುಖಿ ರುದ್ರತಾಂಡವಕ್ಕೆ 100 ಬಲಿ (Indonesian volcano | Bronggang | Mount Merapi | Heru Nogroho,)
Bookmark and Share Feedback Print
 
ಇಂಡೋನೇಷ್ಯಾದಲ್ಲಿ ಸಂಭವಿಸಿರುವ ವೊಲ್‌ಕ್ಯಾನೋ ಜ್ವಾಲಾಮುಖಿ ಪ್ರವಾಹದಂತೆ ಚಿಮ್ಮುತ್ತಿದ್ದು, ಸುತ್ತಮುತ್ತಲಿನ ಪ್ರದೇಶದ ಜನರನ್ನೆಲ್ಲಾ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಜ್ವಾಲಾಮುಖಿ ಪ್ರತಾಪಕ್ಕೆ ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ಏರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜ್ವಾಲಾಮುಖಿಯ ಪ್ರಭಾವ ಎಷ್ಟಿದೆ ಎಂದರೆ ಇಲ್ಲಿನ ಮುಂಟಿಲನ್ ರಸ್ತೆ ಸೇರಿದಂತೆ ಸುತ್ತಮುತ್ತ ಬೂದಿಯಿಂದ ಆವರಿಸಿದ್ದು, ಸಂಚರಿಸುವುದು ಕೂಡ ಕಷ್ಟವಾಗುತ್ತಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಜ್ವಾಲಾಮುಖಿ ರುದ್ರಪ್ರತಾಪಕ್ಕೆ ಸಿಲುಕಿ ಸುಟ್ಟು ಕರಕಲಾಗಿರುವ ಮೃತದೇಹಗಳನ್ನು ಹೊರತೆಗೆಯಲು ಸೈನಿಕರು ಮುಂದಾಗಿದ್ದಾರೆ.

ಜ್ವಾಲಾಮುಖಿಯಿಂದಾಗಿ ಹಲವಾರು ಮಂದಿ ಭಾಗಶಃ ಸುಟ್ಟುಗಾಯಗಳಿಂದ ನರಳುತ್ತಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 80 ವರ್ಷದಲ್ಲಿಯೇ ಇಂತಹ ಭೀಕರ ಜ್ವಾಲಾಮುಖಿ ಸ್ಫೋಟ ಕಂಡಿರಲಿಲ್ಲ ಎಂದು ಮೌಂಟ್ ಮೆರಾಪಿ ಸ್ಥಳೀಯರು ತಿಳಿಸಿದ್ದಾರೆ.

ಜ್ವಾಲಾಮುಖಿಯಿಂದಾಗಿ ಬ್ರೊನ್‌ಗ್ಗಾಂಗ್ ಪ್ರದೇಶದಲ್ಲಿನ ಸುಮಾರು 80 ಕುಟುಂಬಗಳು ಇದ್ದು, ಅವರೆಲ್ಲ ಸುರಕ್ಷಿತ ವಲಯದಲ್ಲಿಯೇ ಇದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ