ಕಳೆದ 2008ರಲ್ಲಿ ನಡೆದ ಮುಂಬೈ ಉಗ್ರರ ದಾಳಿಯ ಕುರಿತಂತೆ ಕೆಲ ವಿವರಗಳನ್ನು ಬಯಸಿ ಪಾಕಿಸ್ತಾನ ದಾಖಲೆಗಳನ್ನು ಭಾರತಕ್ಕೆ ಸಲ್ಲಿಸಿದ್ದು, ಘಟನೆಯಲ್ಲಿ ಸಾಕ್ಷಿಯಾಗಿರುವ ಕೆಲವರ ವಿಚಾರಣೆಗಳನ್ನು ನಡೆಸಲು ಆಯೋಗ ಕಳುಹಿಸಲು ಅನುಮತಿ ನೀಡುವಂತೆ ಕೋರಿದೆ.
ಭಾರತದ ಉಪ ರಾಯಭಾರಿಯಾಗಿರುವ ರಾಹುಲ್ ಕುಲ್‌ಶ್ರೇಷ್ಠಿಯವರಿಗೆ,ಪಾಕಿಸ್ತಾನ ದಾಖಲೆಗಳನ್ನು ವಶಕ್ಕೆ ನೀಡಿದ್ದು, ಮುಂಬೈ ಘಟನೆಗೆ ಸಂಬಂಧಿಸಿದಂತೆ, ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲು ಅನುಮತಿ ನೀಡುವಂತೆ ಕೋರಿದೆ.
ಭಾರತ ಸರಕಾರ ಕೂಡಾ ಪಾಕಿಸ್ತಾನದಲ್ಲಿರು ಉಗ್ರರ ಕುಟುಂಬಗಳ ವಿಚಾರಣೆಗೆ ಅನುಮತಿ ನೀಡುವಂತೆ ಪಾಕಿಸ್ತಾನ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.