ಮೆಕ್ಸಿಕೊ ದೇಶದ ಆಗ್ನೇಯ ಭಾಗದಲ್ಲಿರುನ ಸಿನಾಲೊವಾ ರಾಜ್ಯದಲ್ಲಿ ಇಂಧನ್ ಟ್ಯಾಂಕರ್‌ಗೆ ಪ್ರಯಾಣಿಕರ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ 21 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಧ್ಯರಾತ್ರಿ ಸಮಯದಲ್ಲಿ ಇಂಧನ್ ಟ್ಯಾಂಕರ್ ಮತ್ತು ಪ್ರಯಾಣಿಕರ ಬಸ್ ಮಧ್ಯೆ,ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲಾಡಳಿತದ ಅಧಿಕಾರಿಗಳು ಹೇಳಿಕೆಯೊಂದನ್ನು ನೀಡಿ, ಘಟನೆಯಲ್ಲಿ 19 ಮಂದಿ ಪ್ರಯಾಣಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದು,ಇಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಅಪ್ರಾಪ್ತರು ಮತ್ತು ಎಂಟು ಮಂದಿ ಮಹಿಳೆಯರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬೃಹತ್ ಲಾರಿಯೊಂದು ತಲಾ 20 ಸಾವಿರ ಲೀಟರ್ ತೈಲವನ್ನು ಹೊಂದಿರುವ ಎರಡು ಟ್ಯಾಂಕರ್‌ಗಳನ್ನು ಸಾಗಿಸುತ್ತಿದ್ದು ಅದರಲ್ಲಿ ಒಂದು ಟ್ಯಾಂಕರ್ ಉರುಳಿ ಎದುರಿನಿಂದ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ಅಪ್ಪಳಿಸಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ವರದಿ ಮಾಡಿವೆ.