ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಜನರ ಭಾವನೆಗಳಿಗೆ ಅಮೆರಿಕ ಸ್ಪಂದಿಸುತ್ತಿಲ್ಲ:ಮುಷ್ರಫ್ (Taliban|Pervez Musharraf|Barack Obama|Asif Ali Zardari)
Bookmark and Share Feedback Print
 
ಏಷ್ಯಾ ಪ್ರವಾಸದಲ್ಲಿರುವ ಅಮೆರಿಕ ಅದ್ಯಕ್ಷ ಬರಾಕ್ ಒಬಾಮಾ, ಪಾಕಿಸ್ತಾನವನ್ನು ಪ್ರವಾಸ ಪಟ್ಟಿಯಲ್ಲಿ ಸೇರ್ಪಡೆಗೊಳಿಸದಿರುವುದಕ್ಕೆ, ಪಾಕ್ ಜನತೆಯ ಭಾವನೆಗಳಿಗೆ ಅಮೆರಿಕ ಸ್ಪಂದಿಸುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಪ್ರವಾಸದಲ್ಲಿ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ಅಧ್ಯಕ್ಷ ಒಬಾಮಾ ಭೇಟಿ ನೀಡುತ್ತಿದ್ದಾರೆ.ಆದರೆ, ಪ್ರವಾಸದಿಂದ ಪಾಕಿಸ್ತಾನವನ್ನು ಹೊರಗಿಟ್ಟು ಭಾರತದ ನಾಯಕರೊಂದಿಗೆ ಕಾಶ್ಮಿರ ಸಮಸ್ಯೆಯನ್ನು ಚರ್ಚಿಸಲು ಒಬಾಮಾ ಬಯಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಒಬಾಮಾ ನಿಲುವಿನಿಂದ ನನಗೆ ನಿರಾಶೆಯಾಗಿದೆ. ಪಾಕಿಸ್ತಾನದ ಜನತೆಯ ಭಾವನೆಗಳಿಗೆ ಗೌರವವಿಲ್ಲದಂತಾಗಿದೆ ಎಂದು ಮುಷ್ರಫ್ ಕಿಡಿಕಾರಿದ್ದಾರೆ.

ಒಬಾಮಾ, ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರಿಗೆ ವಾಷಿಂಗ್ಟನ್‌ಗೆ ಆಗಮಿಸುವಂತೆ ಅಹ್ವಾನ ನೀಡಿದ್ದು,ಮುಂದಿನ ವರ್ಷದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ