ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಪರ ಗೂಢಚಾರಿಕೆ; ಮೂವರನ್ನು ಹತ್ಯೆಗೈದ ತಾಲಿಬಾನ್ (Taliban | North Waziristan | publicly execute | Pakistan)
Bookmark and Share Feedback Print
 
ಕಾನೂನಿನ ಹಿಡಿತವಿಲ್ಲದ ವಾಯುವ್ಯ ಪಾಕಿಸ್ತಾನದ ಉತ್ತರ ವಜಿರಿಸ್ತಾನದಲ್ಲಿ ಅಮೆರಿಕದ ಪರವಾಗಿ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ತಾಲಿಬಾನ್ ಉಗ್ರರು ಭಾನುವಾರ ಸಾರ್ವಜನಿಕವಾಗಿಯೇ ಹತ್ಯೆಗೈದ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ವಜಿರಿಸ್ತಾನದ ಪ್ರಮುಖ ನಗರವಾದ ಮಿರ್ಶಾನ್ ರಸ್ತೆ ಸಮೀಪ ಮೂರು ಬುಡಕಟ್ಟು ವ್ಯಕ್ತಿಗಳ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ, ಅವರ ಕೈಗಳನ್ನು ಹಿಂದಕ್ಕೆ ಕಟ್ಟಿ ಒಬ್ಬೊಬ್ಬರನ್ನೇ ಸಾರ್ವಜನಿಕವಾಗಿಯೇ ಗುಂಡಿಟ್ಟು ಸಾಯಿಸಲಾಯಿತು ಎಂದು ಮಾಧ್ಯಮದ ವರದಿಯೊಂದು ವಿವರಿಸಿದೆ. ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮೂವರು 30ರ ಹರೆಯದವರಾಗಿದ್ದಾರೆ.

ರಸ್ತೆ ಸಮೀಪ ಮೂವರನ್ನು ಉಗ್ರರು ಗುಂಡಿಟ್ಟು ಕೊಲ್ಲುತ್ತಿರುವ ದೃಶ್ಯವನ್ನು ಸಾರ್ವಜನಿಕರು ವೀಕ್ಷಿಸಿರುವುದಾಗಿಯೂ ವರದಿ ತಿಳಿಸಿದೆ. ಅಫ್ಘಾನಿಸ್ತಾನ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕ ಮೈತ್ರಿಕೂಟದ ಪಡೆಗಳ ಮೇಲೆ ಹಕ್ಕಾನಿ ಹಾಗೂ ತಾಲಿಬಾನ್ ಸೇರಿದಂತೆ ಇನ್ನಿತರ ಉಗ್ರರು ಸತತವಾಗಿ ದಾಳಿ ನಡೆಸುತ್ತಲೇ ಇದ್ದಾರೆ.

ಅಲ್ಲದೇ ಅಮೆರಿಕದ ಪರವಾಗಿ ಯಾರೇ ಬೇಹುಗಾರಿಕೆ ಮಾಡಿದ್ದಲ್ಲಿ ತಾಲಿಬಾನ್ ಉಗ್ರರು ಅಂತಹವರಿಗೆ ಸಾರ್ವಜನಿಕವಾಗಿಯೇ ಶಿಕ್ಷೆ ವಿಧಿಸುವ ಚಾಳಿ ಇಟ್ಟುಕೊಂಡಿದೆ. ಆ ನಿಟ್ಟಿನಲ್ಲಿ ಈ ಮೂವರು ಅಮೆರಿಕದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗುಂಡಿಟ್ಟು ಹತ್ಯೆಗೈದಿರುವುದಾಗಿ ತಾಲಿಬಾನ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ