ನವಾಬ್ ಅಕ್ಬರ್ ಬುಕ್ತಿ ಹತ್ಯೆ ಹಾಗೂ ಲಾಲ್ ಮಸೀದಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಾನು ವಿಷಾದ ವ್ಯಕ್ತಪಡಿಸುವುದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ತಿಳಿಸಿದ್ದು,ಇಲ್ಲದಿದ್ದಲ್ಲಿ ಈ ಬಗ್ಗೆ ಯಾವುದೇ ರೀತಿಯ ಕ್ಷಮಾಪಣೆ ಕೇಳಲು ಸಿದ್ದ ಎಂಬುದಾಗಿ ಹೇಳಿದ್ದಾರೆ.
ಇಲ್ಲಿ ಮುಸ್ಲಿಮ್ ಲೀಗ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತನಗೆ ಪಾಕಿಸ್ತಾನದಲ್ಲಿ ಮತ್ತೆ ಆಡಳಿತ ನಡೆಸುವ ಅವಕಾಶ ಕೊಟ್ಟರೆ, ತಾನು ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಶಪಥಗೈದಿರುವುದಾಗಿ ಡೈಲಿ ಟೈಮ್ಸ್ ವರದಿ ಮಾಡಿದೆ.
ಆದರೆ ಲಾಲ್ ಮಸೀದಿ ಮತ್ತು ಜಾಮಾ ಹಾಫ್ಸಾ ಕಾರ್ಯಾಚರಣೆಯಲ್ಲಿ ಯಾವುದೇ ಯುವತಿ ಅಥವಾ ಮಹಿಳೆಯರು ಸಾವಿಗೀಡಾಗಿಲ್ಲ ಎಂದು ಸ್ಪಷ್ಟನೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಬಲೂಚಿಸ್ತಾನದಲ್ಲಿ ಪಂಜಾಬಿಗಳನ್ನು ಹತ್ಯೆಗೈದಿರುವ ಬಗ್ಗೆ ನವಾಜ್ ಷರೀಫ್ ಮೌನಕ್ಕೆ ಶರಣಾಗಿದ್ದು, ತನ್ನ ಬಗ್ಗೆ ಅನಾವಶ್ಯಕವಾಗಿ ಆರೋಪಿಸುತ್ತಿದ್ದಾರೆಂದು ಮುಷ್ ಆಕ್ರೋಶವ್ಯಕ್ತಪಡಿಸಿದರು.