ಇಸ್ಲಾಮಾಬಾದ್, ಗುರುವಾರ, 11 ನವೆಂಬರ್ 2010( 16:06 IST )
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ಎರಡನೇ ಮುಖಂಡ ಐಮನ್ ಅಲ್ ಜವಾಹಿರಿಗೆ ಸಂಬಂಧಿಸಿದಂತೆ ತರ್ಜುಮೆಗೊಳಿಸಿದ ಯಾವುದೇ ಪುಸ್ತಕವನ್ನು ಮಾರಾಟ ಮಾಡುವುದಕ್ಕೆ ಮತ್ತು ಪ್ರಕಟಿಸುವುದಕ್ಕೆ ಪಾಕಿಸ್ತಾನದ ಅಧಿಕಾರಿಗಳು ನಿಷೇಧ ಹೇರಿದ್ದಾರೆ.
ಅಲ್ ಜವಾಹಿರಿಯ ಪುಸ್ತಕ ಮಾರಾಟ ಮಾಡುವುದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ದೇಶದ ವಾಯುವ್ಯ ಪ್ರಾಂತ್ಯದ ಖೈಬೆರ್ ಪಾಕ್ತುನ್‌ಖಾವಾ ಸರಕಾರ ಜವಾಹಿರಿಯ ಸ್ಪೈದಾ ಇ ಶೆಹರ್ ಔರ್ ಟಿಂಟಾಮಾಟಾ ಚಿರಾಗ್ ಎಂಬ ಪುಸ್ತಕದ ಮೇಲೆ ನಿಷೇಧ ಹೇರಿದೆ.
ಈಗಾಗಲೇ ಪ್ರಕಟಿತಗೊಂಡಿರುವ ಪುಸ್ತಕಗಳನ್ನು ಶೀಘ್ರವೇ ಮುಟ್ಟುಗೋಲು ಹಾಕುವಂತೆ ಆದೇಶಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಅಲ್ ಜವಾಹಿರಿಯ ಪುಸ್ತಕದಲ್ಲಿ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವ ಅಂಶಗಳಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.