ಜೀವಂತ ಗುಂಡುಗಳನ್ನು ಇಟ್ಟುಕೊಂಡಿದ್ದ 70ರ ಹರೆಯದ ಅಮೆರಿಕ ಪ್ರಜೆಯೊಬ್ಬನನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಇಲ್ಲಿನ ಅಲ್ಲಾಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೈ ಜಾರ್ಜ್ ವಿಲಿಯಮ್ ಅವರ ಬ್ಯಾಗ್ ತಪಾಸಣೆ ಮಾಡಿದ ಸಂದರ್ಭ ಸುಮಾರು 30 ಜೀವಂತ ಗುಂಡುಗಳನ್ನು ಪತ್ತೆಹಚ್ಚಿದ ಬಳಿಕ ಬಂಧಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ವಿಲಿಯಮ್ ಪಿಐಎ ವಿಮಾನ 203ನಲ್ಲಿ ಲಂಡನ್‌ಗೆ ಹೊರಡುವ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಆನ್‌ಲೈನ್ ನ್ಯೂಸ್ ವರದಿ ಮಾಡಿದೆ. ಜೀವಂತ ಗುಂಡುಗಳನ್ನು ಕೊಂಡೊಯ್ಯಲು ಬೇಕಾದ ಅನುಮತಿ ಪತ್ರವನ್ನು ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಆದರೆ ವಿಲಿಯಮ್ ಬಳಿ ಅನುಮತಿ ಪತ್ರ ಇಲ್ಲವಾಗಿತ್ತು. ಬಳಿಕ ವಿಲಿಯಮ್ ಅವರನ್ನು ಬಂಧಿಸಿ ಪೊಲೀಸ್‌ಗೆ ಹಸ್ತಾಂತರಿಸಲಾಯಿತು.