ಭಯೋತ್ಪಾದನಾ ಚಟುವಟಿಕೆ ನಡೆಸಿದ ಆರೋಪದಲ್ಲಿ ಇಸ್ಲಾಮಿಸ್ಟ್ ಉಗ್ರಗಾಮಿ ಮುಖಂಡ ಓಮರ್ ಬಾಕ್ರಿ ಮೊಹಮ್ಮದ್ ಸೇರಿದಂತೆ 21 ಮಂದಿಗೆ ಕೈದಿಗಳಿಗೆ ಲೆಬನಾನ್ ಮಿಲಿಟರಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
ಬಾಕ್ರಿ ಸೇರಿದಂತೆ 47 ಜನರಿಗೆ ಭಯೋತ್ಪಾದನಾ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ಇದರಲ್ಲಿ ಮೂರು ತಿಂಗಳಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆ ಪಡೆದವರು ಕೋರ್ಟ್‌ಗೆ ಗೈರುಹಾಜರಾಗಿದ್ದರು.
ಮಿಲಿಟರಿ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ. ಆದರೆ ಅವರು ಕೋರ್ಟ್ ವಿಚಾರಣೆ ವೇಳೆ ಹಾಜರಿರಬೇಕು ಎಂದು ತಿಳಿಸಿದೆ.
ಬಂಧಿತರೆಲ್ಲ ಶಸ್ತ್ರಾಸ್ತ್ರ ಗುಂಪಿನೊಂದಿಗೆ ಜನರನ್ನು ಕೊಂದಿದೆ. ಅಷ್ಟೇ ಅಲ್ಲ ಭಯೋತ್ಪಾದಕರಿಗೂ ಆಯುಧ ಒದಗಿಸಿ ನಾಗರಿಕರನ್ನು ಕೊಲ್ಲಲು ನೆರವು ನೀಡಿದೆ ಎಂದು ಕೋರ್ಟ್ ಮೂಲಗಳು ಹೇಳಿವೆ. ಆದರೆ ಅವರೆಲ್ಲ ಯಾವ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಖಚಿತವಾಗಿ ಹೇಳಿಲ್ಲ.