ನ್ಯಾಯಾಂಗ ನಿಂದನೆ ಆರೋಪದ ಮೇಲೆ ಸಿಂಗಾಪುರ್ ಕೋರ್ಟ್ ಮಂಗಳವಾರ 76ರ ಹರೆಯದ ಬ್ರಿಟನ್ ಲೇಖಕರೊಬ್ಬರಿಗೆ ಆರು ವಾರಗಳ ಜೈಲುಶಿಕ್ಷೆ ವಿಧಿಸಿ, 15,400 ಡಾಲರ್ ದಂಡ ಹಾಕಿದೆ.
ಸಿಟಿ ಸ್ಟೇಟ್ಸ್ ನ್ಯಾಯಾಂಗ ವ್ಯವಸ್ಥೆ ವಿರುದ್ಧ ತಮ್ಮ ಪುಸ್ತಕದಲ್ಲಿ ಬರೆದಿರುವುದಕ್ಕೆ ಕೋರ್ಟ್ ಲೇಖಕರನ್ನು ತರಾಟೆಗೆ ತೆಗೆದುಕೊಂಡಿದೆ. ಏತನ್ಮಧ್ಯೆ ತಾನು ನ್ಯಾಯಾಂಗದ ಕ್ಷಮೆ ಕೇಳುವುದಾಗಿ ಲೇಖಕ ಅಲಾನ್ ಶಾಡಾರ್ಕೆ ಕೋರಿಕೆ ಇಟ್ಟಿದ್ದರು. ಆದರೆ ತಾನು ಯಾವುದೇ ಕಾರಣಕ್ಕೂ ಪುಸ್ತಕಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲಾರೆ ಎಂದು ಹೇಳಿದ್ದರು.
ನ್ಯಾಯಾಂಗದ ವಿರುದ್ಧವೇ ಟೀಕಿಸಿದ ಬರೆದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶ ಕ್ವೆನ್‌ಟಿನ್ ಲೋಹ್, ನ್ಯಾಯಾಂಗ ನಿಂದನೆ ಆರೋಪದ ಮೇಲೆ ಶಾಡಾರ್ಕೆ ದೋಷಿ ಎಂದು ಆದೇಶ ನೀಡಿದ್ದು, ಆರು ವಾರಗಳ ಜೈಲುಶಿಕ್ಷೆ ಹಾಗೂ 15,400 ಅಮೆರಿಕನ್ ಡಾಲರ್ ದಂಡ ತೆರಬೇಕೆಂದು ತೀರ್ಪು ನೀಡಿದ್ದಾರೆ.
ಸಿಟಿ ಸ್ಟೇಟ್ಸ್ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸಿ ಪುಸ್ತಕ ಬರೆದಿರುವ ಲೇಖಕ ಶಾಡಾರ್ಕೆಗೆ ಕನಿಷ್ಠ 12 ವಾರಗಳ ಜೈಲುಶಿಕ್ಷೆಯನ್ನು ವಿಧಿಸಬೇಕೆಂದು ಅಟಾರ್ನಿ ಜನರಲ್ ವಾದ ಮಂಡಿಸಿದ್ದರು.