ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್: ಅಕ್ರಮ ಸಂಬಂಧ-ಕಲ್ಲು ಹೊಡೆದು ಹತ್ಯೆ (woman sentenced | death by stoning | Mohammadi Ashtiani | Supreme Court)
Bookmark and Share Feedback Print
 
ಪರ ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿ, ತನ್ನ ಗಂಡನನ್ನು ಹತ್ಯೆಗೈದ ಇರಾನ್ ಮಹಿಳೆಯೊಬ್ಬಳನ್ನು ಕಲ್ಲು ಹೊಡೆದು ಸಾಯಿಸಿರುವ ಘಟನೆಯೊಂದನ್ನು ಇರಾನ್ ಸ್ಟೇಟ್ ಟೆಲಿವಿಷನ್‌ವೊಂದು ಬಹಿರಂಗಪಡಿಸಿದೆ.

43ರ ಹರೆಯದ ಸಾಕಿನೆಹ್ ಮೊಹಮ್ಮಾದಿ ಆಶ್ತಿಯಾನಿ ಎಂಬಾಕೆಯ ಕೈಯನ್ನು ಹಿಂದಕ್ಕೆ ಕಟ್ಟಿ ಕಲ್ಲು ಹೊಡೆದು ಸಾಯಿಸಲಾಯಿತು ಎಂದು ವರದಿ ವಿವರಿಸಿದೆ.

ಮಹಿಳೆಯನ್ನು ಆಶ್ತಿಯಾನಿ ಎಂದು ಗುರುತಿಸಲಾಗಿದೆ ಎಂದು ವರದಿ ತಿಳಿಸಿದ್ದು, ನಾನು ಪಾಪ ಮಾಡಿದ್ದೇನೆ ಎಂಬ ಮಾತುಗಳನ್ನು ಉಚ್ಚರಿಸುತ್ತಿರುವುದನ್ನು ಟಿವಿ ವರದಿ ಬಿತ್ತರಿಸಿದೆ. ಆದರೆ ಆಕೆಯ ಮುಖವನ್ನು ಮಸುಕಾಗಿ ತೋರಿಸಲಾಗಿದೆ. ಆಕೆಯ ಹೇಳಿಕೆಯನ್ನು ಪಾರ್ಸಿ ಭಾಷೆಯಲ್ಲಿ ಹೇಳುತ್ತಿದ್ದು, ಅದನ್ನು ಟರ್ಕಿ ಭಾಷೆಗೆ ಭಾಷಾಂತರಿಸಿ ವರದಿಯಲ್ಲಿ ಪ್ರಸಾರ ಮಾಡಲಾಗಿತ್ತು.

ಕಳೆದ ತಿಂಗಳಷ್ಟೇ ಆಶ್ತಿಯಾನಿ ಸೇರಿದಂತೆ ಆಕೆಯ ಪುತ್ರ ಸಾಜಿಯಾದ್ ಹಾಗೂ ಆಕೆಯ ವಕೀಲ ಹೌಟಾನ್ ಜಾವಿದ್ ಕಿಯಾನ್ ಎಂಬವರನ್ನು ಬಂಧಿಸಲಾಗಿತ್ತು. ಆಶ್ತಿಯಾನಿ ಇಬ್ಬರು ಪುರುಷರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ನಂತರ ತನ್ನ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ 2006ರಲ್ಲಿ ದೋಷಿ ಎಂದು ಘೋಷಿಸಲಾಗಿತ್ತು. ಆ ಸಂದರ್ಭದಲ್ಲಿ ಕೋರ್ಟ್ 99 ಛಡಿಯೇಟಿನ ಶಿಕ್ಷೆಯನ್ನು ವಿಧಿಸಿತ್ತು. ತದನಂತರ ಆಕೆಯ ಅಪರಾಧಕ್ಕಾಗಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆಯನ್ನು ನೀಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ