ವಿಶ್ವಸಂಸ್ಥೆ-ಭಾರತಕ್ಕೆ ಕೂಡಲೇ ಕಾಯಂ ಸ್ಥಾನವಿಲ್ಲ!: ಅಮೆರಿಕ
ವಾಷಿಂಗ್ಟನ್, ಬುಧವಾರ, 17 ನವೆಂಬರ್ 2010( 12:49 IST )
ವಿಶ್ವದ ದೊಡ್ಡಣ್ಣ ಎಂದೇ ಬಿಂಬಿತವಾಗಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಈಗ ಬೊಗಳೆ ದೊಡ್ಡಣ್ಣ ಎಂಬುದು ಮತ್ತೆ ಸಾಬೀತಾಗಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಗ್ಯಾರಂಟಿ ಎಂದು ಭರವಸೆ ತೋರಿಸಿದ್ದು, ಈಗ ಕೇವಲ ಕನಸಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಇದರಿಂದಾಗಿಯೇ ಅಮೆರಿಕದ ದ್ವಿಮುಖ ನೀತಿ ಮತ್ತೆ ಬಯಲಾಗಿದೆ.
ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವುದಕ್ಕೆ ಅಮೆರಿಕದ ತಕರಾರಿಲ್ಲ, ಆದರೆ ಇದು ನಾವು ಅಂದುಕೊಂಡಷ್ಟು ಸುಲಭವಾಗಿ ಆಗುವ ಅಥವಾ ತರಾತುರಿಯಲ್ಲಿ ಮಾಡುವ ಕೆಲಸವಲ್ಲ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಶೀಘ್ರವೇ ಕಾಯಂ ಸ್ಥಾನ ದೊರೆಯುತ್ತದೆ ಎಂದು ಭಾರತ ನಿರೀಕ್ಷಿಸುವುದು ತಪ್ಪು ಎಂದು ಅಮೆರಿಕದ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್ ಸ್ಪಷ್ಟಪಡಿಸಿದ್ದಾರೆ.