ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಅಧಿಕಾರಿಗಳಿಂದ ಮುಷ್‌ಗೆ ಭದ್ರತೆ: ಜರ್ದಾರಿ ಆದೇಶ (Musharraf | Asif Ali Zardari | Pervez Musharraf | Islamabad)
Bookmark and Share Feedback Print
 
ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೆಜ್ ಮುಷರ್ರಫ್ ಅವರಿಗೆ ಲಂಡನ್‌ನಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರಿಗೆ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಆದೇಶ ನೀಡಿದ್ದಾರೆ.

ಲಂಡನ್‌ನಲ್ಲಿ ಮುಷರ್ರಫ್ ಅವರಿಗೆ ರಕ್ಷಣೆ ನೀಡಲು ಪಾಕಿಸ್ತಾನದ ಮಿಲಿಟರಿ ಅಧಿಕಾರಿ ಕರ್ನಲ್ ಇಲ್ಯಾಸ್ ಅವರನ್ನು ನೇಮಕ ಮಾಡಿ ಜರ್ದಾರಿ ಆದೇಶ ನೀಡಿದ್ದಾರೆ. ಅವರು ದೇಶದ ಮಾಜಿ ಅಧ್ಯಕ್ಷರು, ಹಾಗಾಗಿ ಮಾನವೀಯತೆ ನೆಲೆಯಲ್ಲಿ ಅವರಿಗೆ ರಕ್ಷಣೆ ನೀಡಲು ಇಲ್ಯಾಸ್ ಅವರನ್ನು ಭದ್ರತಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಜರ್ದಾರಿ ತಿಳಿಸಿದ್ದಾರೆ.

1999ರಲ್ಲಿ ರಕ್ತರಹಿತ ಕ್ಷಿಪ್ರಕ್ರಾಂತಿ ಮೂಲಕ ಮಿಲಿಟರಿ ಜನರಲ್ ಆಗಿದ್ದ ಮುಷರ್ರಪ್ ಅವರು ಪಾಕಿಸ್ತಾನದ ಅಧಿಕಾರದ ಗದ್ದುಗೆ ಹಿಡಿದು, ಸುಮಾರು 9 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಕೊನೆಗೆ ಭಾರೀ ಒತ್ತಡದ ನಡುವೆ 2008ರಲ್ಲಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದಿದ್ದರು. ಇದೀಗ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅಷ್ಟೇ ಅಲ್ಲ, ಲಂಡನ್‌ನಲ್ಲಿ ಮುಷರ್ರಫ್ ಅವರಿಗೆ ಭದ್ರತೆ ನೀಡಲು ಇನ್ನೂ ಐದು ಮಂದಿಯನ್ನು ನಿಯೋಜಿಸಿದ್ದಾರೆ ಎಂದು ಇಲ್ಯಾಸ್ ಹೇಳಿದ್ದಾರೆ. ಮಿಲಿಟರಿಯ ಮಾಜಿ ವರಿಷ್ಠ ಮುಷರ್ರಫ್ ಅವರಿಗೆ ಭದ್ರತೆ ನೀಡಲು ಮಿಲಿಟರಿ ಹಾಲಿ ವರಿಷ್ಠ ಜನರಲ್ ಅಶ್ಪಾಕ್ ಕಯಾನಿ ಅವರು ಕೂಡ ಸಮ್ಮತಿ ಸೂಚಿಸಿದ್ದು, ಐದು ಮಂದಿ ಸೇವೆ ಸಲ್ಲಿಸಲು ಅವರು ಅನುಮತಿ ನೀಡಿರುವುದಾಗಿ ಇಲ್ಯಾಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ