ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಷ್ಕರ್‌ಗಿಂತ ಅಲ್ ಖಾಯಿದಾ ಅಪಾಯಕಾರಿ: ಅಮೆರಿಕ (Lashkar-e-Toiba | Pakistan | al Qaeda | Hamas | US official)
Bookmark and Share Feedback Print
 
ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ತುಂಬಾ ಅಪಾಯಕಾರಿ ಉಗ್ರಗಾಮಿ ಸಂಘಟನೆ. ಆದರೆ ಅಲ್ ಖಾಯಿದಾದಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲ ಎಂದು ಅಮೆರಿಕ ಭಯೋತ್ಪಾದನಾ ನಿಗ್ರಹ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಷ್ಕರ್ ಇ ತೊಯ್ಬಾ ನಿಜಕ್ಕೂ ಅಪಾಯಕಾರಿ ಸಂಘಟನೆ. ಅದೇ ರೀತಿ ಹಮಾಸ್, ಹೆಜ್‌ಬೊಲ್ಲಾ ರೀತಿ ಸಾಮಾಜಿ ಸೇವೆಗೂ ಬೆಂಬಲ ನೀಡುತ್ತದೆ. ಇದು ಶ್ಲಾಘನೀಯ ವಿಚಾರ ಎಂದು ಭಯೋತ್ಪಾದನಾ ನಿಗ್ರಹ ದಳ ಇಲಾಖೆಯ ಡೇನಿಯೆಲ್ ಬೆನ್‌ಜಾಮಿನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಹಾಗಾಗಿ ಅಲ್ ಖಾಯಿದಾಕ್ಕಿಂತ ಲಷ್ಕರ್ ಇ ತೊಯ್ಬಾ ತುಂಬಾ ಅಪಾಯಕಾರಿ ಸಂಘಟನೆ ಎಂದು ಅನ್ನಿಸುತ್ತಿಲ್ಲ. ಆದರೆ ಪ್ರಸ್ತುತವಾಗಿ ಲಷ್ಕರ್ ತುಂಬಾ, ತುಂಬಾ ಅಪಾಯಕಾರಿ ಸಂಘಟನೆಯಾಗಿದೆ. ಆ ನಿಟ್ಟಿನಲ್ಲಿ ಲಷ್ಕರ್ ಸಂಘಟನೆಯನ್ನು ಮಟ್ಟಹಾಕಲು ಪಾಕಿಸ್ತಾನದ ನೆರವಿನೊಂದಿಗೆ ಅಮೆರಿಕ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಹೇಳಿದರು. ಭಾರತದ ಮುಂಬೈ ದಾಳಿಕೋರರನ್ನು ಸೆರೆ ಹಿಡಿದು ನ್ಯಾಯ ಒದಗಿಸಿ ಕೊಡುವ ಪಾಕಿಸ್ತಾನದ ಶ್ರಮಕ್ಕೆ ಅಮೆರಿಕ ಕೂಡ ಪೂರ್ಣಪ್ರಮಾಣದಲ್ಲಿ ಬೆಂಬಲ ನೀಡಲಿ ಎಂದರು.
ಸಂಬಂಧಿತ ಮಾಹಿತಿ ಹುಡುಕಿ