ಅಧಿಕಾರದ ದಾಹ ಮನುಷ್ಯನಿಗೆ ಎಷ್ಟಿರುತ್ತದೆ ಎಂಬುದಕ್ಕೆ ಒಮಾನ್ ಸುಲ್ತಾನ್ ಮತ್ತೊಂದು ಸಾಕ್ಷಿಯಾಗಿದ್ದಾರೆ. ಅವರೀಗ ಒಮಾನ್‌ನ ಸುಲ್ತಾನ್ ಖ್ವಾಬೂಸ್ ಬಿನ್ ಸೈಯದ್ ಅಲ್ ಸೈಯದ್ ಗದ್ದುಗೆ ಏರಿ 40 ವರ್ಷವನ್ನು ಪೂರೈಸಿದ್ದಾರೆ.!
ಸುಲ್ತಾನ್ ಖ್ವಾಬೂಸ್ ಅವರು ಸುಲ್ತಾನ್ ಮಾತ್ರವಲ್ಲ ಒಮಾನ್ ಆರ್ಮಿ ಪಡೆಯ ಸುಪ್ರೀಂ ಕಮಾಂಡರ್ ಕೂಡ ಹೌದು. ಅವರು ಸುಲ್ತಾನ್ ಆರ್ಮಡ್ ಫೋರ್ಸ್‌ಸ್(ಎಸ್ಎಎಫ್), ದಿ ರಾಯಲ್ ಗಾರ್ಡ್ ಆಫ್ ಒಮಾನ್ ಹಾಗೂ ರಾಯಲ್ ಒಮಾನ್ ಪೊಲೀಸ್ (ಆರ್ಒಪಿ)ಗೆ ಕಮಾಂಡರ್ ಆಗಿದ್ದಾರೆ.
ಸುಲ್ತಾನ್ ಗುರುವಾವರ ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ದೇಶದ 40ನೇ ನ್ಯಾಷನಲ್ ಡೇ ಸಮಾರಂಭವನ್ನು ನವೆಂಬರ್ 29ಕ್ಕೆ ನಡೆಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಸುಲ್ತಾನ್ ಅಧಿಕಾರದ ಗದ್ದುಗೆ ಏರಿ 40 ವರ್ಷವಾದ ಬಗ್ಗೆಯೂ ದೇಶಾದ್ಯಂತ ಅದ್ದೂರಿ ಕಾರ್ಯಕ್ರಮಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಸುಲ್ತಾನ್ ಅವರ ಬೃಹತ್ ಗಾತ್ರದ ಮಾರ್ಬಲ್ ಮೊಜಾಯಿಕ್ ಭಾವಚಿತ್ರವನ್ನು ಅನಾವರಣಗೊಳಿಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮದ ವರದಿಯೊಂದು ತಿಳಿಸಿದೆ. ಈ ಭಾವಚಿತ್ರ ಎಂಟು ಮೀಟರ್ ಎತ್ತರ ಹಾಗೂ ಐದು ಮೀಟರ್ ಅಗಲವಾಗಿದೆ ಎಂದು ವಿವರಿಸಿದೆ.