ವೆಲ್ಲಿಂಗ್ಟನ್, ಶುಕ್ರವಾರ, 19 ನವೆಂಬರ್ 2010( 16:36 IST )
ನ್ಯೂಜಿಲೆಂಡ್ ಕುಗ್ರಾಮ ಪಶ್ಚಿಮ ಪ್ರದೇಶದ ಕಲ್ಲಿದ್ದಲು ಗಣಿಯೊಳಗೆ ಸಂಭವಿಸಿದ ಸ್ಫೋಟದಿಂದಾಗಿ ಸುಮಾರು 36 ಮಂದಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದ್ದು, ಬಹುತೇಕ ಅವರೆಲ್ಲ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.
ದಕ್ಷಿಣ ದ್ವೀಪ ಪ್ರದೇಶದ ಪಿಕೆ ರಿವರ್ ಕಲ್ಲಿದ್ದಲು ಗಣಿಯೊಳಗೆ ಸ್ಫೋಟ ಸಂಭವಿಸಿದ್ದು, ಇಬ್ಬರು ಗಣಿ ಕಾರ್ಮಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಆದರೆ ಉಳಿದ ಕಾರ್ಮಿಕರ ಬಗ್ಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಶೇಷ ಗಣಿ ರಕ್ಷಣಾ ತಂಡ ಆಗಮಿಸಿದ್ದಾರೆ. ಅವರಿಗೆ ಈವರೆಗೂ ಗಣಿ ಸುರಂಗ ಮಾರ್ಗದೊಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾರೆ. ಯಾವ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂಬ ಬಗ್ಗೆ ತಿಳಿದು ಬಂದಿಲ್ಲ.