ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅವಿವಾಹಿತ ಅಧ್ಯಕ್ಷ ಖಾಮಾಗೆ ತೆಳ್ಳಗಿನ ಹುಡುಗಿ ಬೇಕಂತೆ! (Botswana President | wife | Ian Khama | bachelor,)
Bookmark and Share Feedback Print
 
ದಕ್ಷಿಣ ಆಫ್ರಿಕಾ ಸಮೀಪದ ಬೋಟ್ಸ್‌ವಾನಾ ಅಧ್ಯಕ್ಷರಿಗೆ ಮದುವೆಯಾಗಲು 'ಎತ್ತರವಾದ ಹಾಗೂ ತೆಳ್ಳಗಿನ' ಹುಡುಗಿಯೊಬ್ಬಳು ಬೇಕಾಗಿದ್ದಳಂತೆ.ಈ ವಿಷಯವನ್ನು ಬೇರಾರು ಹೇಳಿಲ್ಲ, ಸ್ವತಃ ಅಧ್ಯಕ್ಷರೇ ತಿಳಿಸಿದ್ದಾರೆ.!

ಬೋಟ್ಸ್‌ವಾನಾ ಅಧ್ಯಕ್ಷ ಇಯಾನ್ ಖಾಮಾ (57) ಇನ್ನೂ ಅವಿವಾಹಿತರಾಗಿದ್ದಾರೆ. ಆದರೆ ಈಗ ಅಧ್ಯಕ್ಷರು ಮದುವೆಯಾಗಲು ಹೊರಟಿದ್ದಾರೆ. ಅದಕ್ಕಾಗಿ ತಮ್ಮ ಬೆಂಬಲಿಗರಲ್ಲಿ ತನ್ನ ಇಷ್ಟವಾಗುವ ಹುಡುಗಿಯನ್ನು ಹುಡುಕಲು ಸೂಚಿಸಿದ್ದಾರೆ.

ನಾನೀಗ ಮದುವೆಯಾಗಲು ಇಚ್ಛಿಸಿದ್ದೇನೆ. ಹಾಗಾಗಿ ನನಗೆ ಎತ್ತರವಾದ ಮತ್ತು ತೆಳ್ಳಗಿನ, ನೋಡಲು ಸುಂದರ ಇರುವ ಹುಡುಗಿ ಬೇಕಾಗಿದ್ದಾಳೆ ಎಂದು ಸೂಚಿಸಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

ಪಕ್ಷದ ಸಭೆಯಲ್ಲಿಯೇ ಅಧ್ಯಕ್ಷರು ಈ ಮಾಹಿತಿಯನ್ನು ಹೊರಹಾಕಿರುವುದಾಗಿ ವರದಿ ತಿಳಿಸಿದೆ. ನನಗೆ ಸಮಯದ ಅಭಾವ ಇರುವುದರಿಂದ ನನ್ನ ಹೆಂಡತಿಯಾಗುವವಳು ಹೇಗಿರಬೇಕೆಂದು ನಿಮಗೆ ವಿವರಿಸಿದ್ದೇನೆ. ಆ ನಿಟ್ಟಿನಲ್ಲಿ ಹುಡುಗಿಯನ್ನು ಪತ್ತೆ ಹಚ್ಚುವ ಜವಾಬ್ದಾರಿ ನಿಮ್ಮದು ಎಂದು ಖಾಮಾ ತಮ್ಮ ಬೆಂಬಲಿಗರಲ್ಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ