ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಸಿಖ್ ಯಾತ್ರಾರ್ಥಿ ಟೆಂಟ್‌ಗೆ ಬೆಂಕಿ (Pakistan | catches fire | Sikh pilgrims | tents)
Bookmark and Share Feedback Print
 
ಪಾಕಿಸ್ತಾನದ ನಾನ್‌ಕಾನಾ ಸಾಹಿಬ್ ನಗರದಲ್ಲಿ ಸಿಖ್ ಯಾತ್ರಾರ್ಥಿಗಳ ಸುಮಾರು 20 ಟೆಂಟ್‌ಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ. ಆದರೆ ಸಾವು-ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ.

ಸಿಖ್ ಸಮುದಾಯದ ಗುರು ನಾನಕ್ ಅವರು 542ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸಿದ್ದರು. ಟೆಂಟ್‌ಗಳಿಗೆ ಏಕಾಏಕಿ ಬೆಂಕಿಹೊತ್ತುಕೊಂಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ಟಿವಿ ವರದಿ ತಿಳಿಸಿದೆ.

ಟೆಂಟ್‌ಗೆ ಬೆಂಕಿ ಹಿಡಿದ ಸಮಯದಲ್ಲಿ ಹೆಚ್ಚಿನ ಯಾತ್ರಾರ್ಥಿಗಳು ಗುರುದ್ವಾರಾ ಸಚಾ ಸೌದಾಕ್ಕೆ ತೆರಳಿದ್ದರು ಎಂದು ವರದಿ ವಿವರಿಸಿದೆ. ಆ ಸಂದರ್ಭದಲ್ಲಿ ಕೆಲವು ಮಹಿಳೆಯರು ಮತ್ತು ಮಕ್ಕಳು ಮಾತ್ರ ಇದ್ದಿದ್ದು, ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ