ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದ್ಯಾರ್ಥಿನಿ ಹತ್ಯೆ: ಭಾರತೀಯ ಶಿಕ್ಷಕನಿಗೆ 39 ವರ್ಷ ಜೈಲು! (Nepal | Kathmandu | Biren Pradhan | Darjeeling | Shrestha,)
Bookmark and Share Feedback Print
 
ಕಳೆದ ವರ್ಷ ನೇಪಾಳಿ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈದು, ಆಕೆಯ ದೇಹದ ಅಂಗಗಳನ್ನು ಕತ್ತರಿಸಿ ವಿವಿಧ ಜಿಲ್ಲೆಗಳಲ್ಲಿ ಎಸೆದಿದ್ದ ಆರೋಪಿ ಭಾರತೀಯ ಮೂಲದ ಶಿಕ್ಷಕನಿಗೆ ಕೋರ್ಟ್ 39 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಭಾರತದ ಡಾರ್ಜಿಲಿಂಗ್ ಮೂಲದ ಬಿರೆನ್ ಪ್ರಧಾನ್ (43) ಎಂಬಾತ ನೇಪಾಳದಲ್ಲಿ ಕಳೆದ ಎರಡು ಇಪ್ಪತ್ತು ವರ್ಷಗಳಿಂದ ಕಾಠ್ಮಂಡು ಕಣಿವೆಯ ಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿಕೊಂಡು ಹೋಗಿ, ಆಕೆಯನ್ನು ಹತ್ಯೆಗೈದಿದ್ದ. ಈ ಘಟನೆ ನೇಪಾಳದ ಜನರಿಗೆ ಆಘಾತ ತಂದಿತ್ತು.

ಶಿಕ್ಷಕನ ಈ ಕ್ರೂರತನದ ವಿರುದ್ಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿರಂತರವಾಗಿ ಪ್ರತಿಭಟನೆ ನಡೆಸಿದ್ದವು. ತದ ನಂತರ ಘಟನೆಗೆ ಸಂಬಂಧಿಸಿದಂತೆ ಪ್ರಧಾನ್‌ನನ್ನು ಪೊಲೀಸರು ಬಂಧಿಸಿದ್ದರು. ವಿದ್ಯಾರ್ಥಿನಿ ಖ್ಯಾಟಿ ಶ್ರೇಷ್ಠಾಳನ್ನು ಅಪಹರಿಸಿಕೊಂಡು ಹೋಗಿ ಹೊಡೆದು ಕೊಂದಿದ್ದ. ಅಷ್ಟೇ ಅಲ್ಲ ಆಕೆಯ ತಲೆ, ಕಾಲು, ಹೊಟ್ಟೆಯನ್ನು ಕತ್ತರಿಸಿ ವಿವಿಧ ಜಿಲ್ಲೆಯ ಹೊಳೆಗಳಿಗೆ ಎಸೆದಿದ್ದ.

ಪ್ರಧಾನ್ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆತನಿಗೆ ಜೂಜಿನ ಚಟ ಹತ್ತಿಕೊಂಡಿತ್ತು. ಇದರಿಂದಾಗಿ ಆತ ಕಾಠ್ಮಂಡುವಿನ ಕ್ಯಾಸಿನೊಗಳಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅದಕ್ಕಾಗಿ ಆತನಿಗೆ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಆತ ಒಂದು ಸಂದರ್ಭದಲ್ಲಿ ತನಗೆ ಪರಿಚಿತವಾಗಿದ್ದ ಖಾಟಿ ಕುಟುಂಬದ ಮೇಲೆ ಕಣ್ಣು ಹಾಕಿದ್ದ. ವಿದ್ಯಾರ್ಥಿನಿಯನ್ನು ಅಪಹರಿಸಿ ಹಣ ಪಡೆಯುವುದು ಆತನ ಉದ್ದೇಶವಾಗಿತ್ತು. ಅದಕ್ಕಾಗಿ ಆತ ಆಕೆಯನ್ನು ಅಪಹರಿಸಿ ಕೊಲೆಗೈದು ಬಿಟ್ಟಿದ್ದ. ಆಕೆಯ ತಾಯಿ ಒತ್ತೆ ಹಣ ಕೊಡುವ ಸಂದರ್ಭದಲ್ಲಿ ತೆರಳಿದಾಗ ಈತನ ಬಂಡವಾಳ ಬಯಲಾಗಿತ್ತು. ಬಳಿಕ ಆತನನ್ನು ಪೊಲೀಸರ ಅತಿಥಿಯಾಗಿದ್ದ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಾಲೇಂದ್ರ ರೂಪಾಖೇಟಿ, ಅಪಹರಣ, ಕೊಲೆ ಮಾಡಿದ ಆರೋಪದ ಮೇಲೆ ಪ್ರಧಾನ್‌ಗೆ 39 ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ