ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಭಾನುವಾರದಿಂದ ಮೂರು ದಿನಗಳ ಅವಧಿಯ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸಿರಿಯಾ ಪ್ರವಾಸವನ್ನು ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಣ ಉದ್ಯಮ ವ್ಯವಹಾರವು ಪ್ರಮುಖ ಚರ್ಚಾ ವಿಷಯವಾಗಲಿದೆ.
ಇದು ಪ್ರತಿಭಾ ಅವರ ಚೊಚ್ಚಲ ಗಲ್ಪ್ ರಾಷ್ಟ್ರಗಳ ಪಯಣವಾಗಿದೆ. ಉದ್ಯಮ ವ್ಯವಹಾರ ಪ್ರಗತಿಗೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕೊನೆಯ ಬಾರಿ ಡಾ. ಅಬ್ದುಲ್ ಕಲಾಂ 2003ರಲ್ಲಿ ಯುಎಇಗೆ ಭೇಟಿ ನೀಡಿದ್ದರು. ಇದೀಗ ದ್ವಿಪಕ್ಷೀಯ ವ್ಯವಹಾರಗಳ ಬಗ್ಗೆ ಪ್ರತಿಭಾ ಮಾತುಕತೆ ನಡೆಸಲಿದ್ದಾರೆ.