17ರ ಹರೆಯದ ವಿದ್ಯಾರ್ಥಿಯೊಬ್ಬನ ಮೇಲೆ ಸುಮಾರು ಹತ್ತು ಮಂದಿ ಮಹಿಳೆಯರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಪಪುವಾ ನ್ಯೂ ಗಿನಿಯಾ ಎಂಬಲ್ಲಿ ನಡೆದಿದೆ.
ಮೆಂಡಿ ಪ್ರಾಂತೀಯ ಪ್ರದೇಶದ ಹೊರಭಾಗದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನ ಮೇಲೆ ಚೂರಿ ಹಿಡಿದ ಮಹಿಳೆಯರ ಗುಂಪೊಂದು ಏಕಾಏಕಿ ದಾಳಿ ನಡೆಸಿ ಅತ್ಯಾಚಾರ ಎಸಗಿರುವುದಾಗಿ ದಕ್ಷಿಣ ಹೈಲ್ಯಾಂಡ್ಸ್ ಪ್ರಾಂತ್ಯದ ಪೊಲೀಸ್ ಕಮಾಂಡರ್ ಟೆಡ್ಡಿ ಟೈ ತಿಳಿಸಿದ್ದಾರೆ.
ಹತ್ತು ಮಂದಿ ಮಹಿಳೆಯರ ಗುಂಪು ಹುಡುಗನ ಮೇಲೆ ದಾಳಿ ನಡೆಸಿ, ನಾಲ್ಕು ಮಹಿಳೆಯರು ಹುಡುಗನ ಜತೆ ಲೈಂಗಿಕ ಚಟುವಟಿಕೆ ನಡೆಸಿರುವುದಾಗಿ ವಿವರಿಸಿರುವ ಟೆಡ್ಡಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಹಿಳೆಯರ ಗುರುತು ಪತ್ತೆ ಹಚ್ಚಿ ಸೆರೆ ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.