ಸಂಪ್ರದಾಯದ ಹಾಡು, ಕುಣಿತದೊಂದಿಗೆ ಪಾಕಿಸ್ತಾನದ ಹಿಂದೂ ಕೌನ್ಸಿಲ್ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ 56 ಹಿಂದೂ ಜೋಡಿಗಳು ಕರಾಚಿಯಲ್ಲಿ ಹಸೆಮಣೆ ಏರಿರುವುದಾಗಿ ವರದಿಯೊಂದು ತಿಳಿಸಿದೆ.
ಕರಾಚಿ ಮತ್ತು ಸಿಂಧ್ ಪ್ರಾಂತ್ಯದ ನವ ವಧು-ವರರು ದಾಂಪತ್ಯ ಜೀನಕ್ಕೆ ಕಾಲಿಟ್ಟಿದ್ದಾರೆ. ಇದರಲ್ಲಿ 31 ಜೋಡಿ ಕರಾಚಿ ಹಾಗೂ 25 ಸಿಂಧ್ ಪ್ರಾಂತ್ಯಕ್ಕೆ ಸೇರಿದ್ದಾರೆ. ಈ ಮದುವೆ ಸಮಾರಂಭ ಶನಿವಾರ ರಾತ್ರಿ ಆರಂಭವಾಗಿ ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡಿತ್ತು.
ಪ್ರತಿಯೊಂದು ಜೋಡಿಗಳಿಗೂ ಸಂಘಟಕರು ಪ್ರತ್ಯೇಕ ಮಂಟಪದ ವ್ಯವಸ್ಥೆ ಮಾಡಿದ್ದರು. ಮದುಮಕ್ಕಳು ಪವಿತ್ರ ಅಗ್ನಿಯ ಮುಂದೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ಪ್ರತಿ ಜೋಡಿಗೂ ಗಿಫ್ಟ್ ನೀಡಲಾಗಿತ್ತು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.