ಪಾಕಿಸ್ತಾನಿ ಮೂಲದ ಲಷ್ಕರ್ ಇ ತೊಯ್ಬಾದ ಮತ್ತಷ್ಟು ಮುಖಂಡರು ಸೇರಿದಂತೆ ಹಲವು ಉಗ್ರ ಸಂಘಟನೆ ಮೇಲೆ ಪಾಕಿಸ್ತಾನ ನಿರ್ಬಂಧ ಹೇರುವ ಮೂಲಕ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಗಿದೆ.
ಲಷ್ಕರ್ ಇ ತೊಯ್ಬಾದ ವಾಣಿಜ್ಯ ಡಿಪಾರ್ಟ್‌ಮೆಂಟ್ ಮುಖ್ಯಸ್ಥ, ಜಾಗತಿಕ ಭಯೋತ್ಪಾದಕ ಮಿಯಾನ್ ಅಬ್ದುಲ್ಲಾ, ಆರ್ಥಿಕ ವ್ಯವಹಾರಗಾರ ಮೊಹಮ್ಮದ್ ನೌಶಾದ್ ಅಲಾಮ್ ಖಾನ್ ಚಟುವಟಿಕೆ ಮೇಲೆ ನಿರ್ಬಂಧ ಹೇರಿದೆ.
ಅದೇ ರೀತಿ ನಿಷೇಧಿತ ಲಷ್ಕರ್ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿರುವ ಪಾಕಿಸ್ತಾನಿ ಮೂಲದ ಫಾಲಾಹ್ ಐ ಇನ್ಸಾನಿಯತ್ ಪೌಂಡೇಶನ್ (ಎಫ್ಐಎಫ್), ಪಾಕಿಸ್ತಾನಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿರುವ ಜಮಾತ್ ಉದ್ ದಾವಾ ಮೇಲೂ ನಿಷೇಧ ಹೇರಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಭಾರತದಲ್ಲಿ ನಡೆದಿರುವ ಹಲವಾರು ಭಯೋತ್ಪಾದಕ ಘಟನೆಗಳಿಗೆ ತಾವೇ ಹೊಣೆ ಎಂದು ಲಷ್ಕರ್ ಹೇಳಿಕೊಂಡಿತ್ತು. ಅಲ್ಲದೇ 2008ರ ನವೆಂಬರ್ ತಿಂಗಳಿನಲ್ಲಿ ಮುಂಬೈ ಉಗ್ರರು ನಡೆಸಿದ ದಾಳಿಗೆ 166 ಮಂದಿ ಬಲಿಯಾಗಿದ್ದರು. ಈ ಘಟನೆಯ ಹೊಣೆಯನ್ನೂ ಲಷ್ಕರ್ ಹೊಣೆಯಾಗಿದೆ.