ಇಸ್ಲಾಮಾಬಾದ್, ಗುರುವಾರ, 25 ನವೆಂಬರ್ 2010( 17:20 IST )
ಪಾಕಿಸ್ತಾನ ನೆರೆ ಸಂತ್ರಸ್ತರಿಗಾಗಿ ನೀಡಿರುವ ಲಕ್ಷಾಂತರ ರೂಪಾಯಿ ಪರಿಹಾರ ಹಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರವಾಹ ಸಂತ್ರಸ್ತ ಜನರಿಗೆ ಸರಕಾರ ಮೋಸ ಮಾಡಿದೆ ಎಂಬ ಆರೋಪ ಹುರುಳಿಲ್ಲದ್ದು ಎಂದು ಮಲಿಕ್ ಬಿಬಿಸಿ ಜತೆ ಮಾತನಾಡುತ್ತ ತಿಳಿಸಿದ್ದು, ಅಲ್ಲದೇ ನೆರೆ ಸಂತ್ರಸ್ತರಿಗೆ ಭಾರೀ ಪ್ರಮಾಣದಲ್ಲಿ ಪರಿಹಾರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಸಂತ್ರಸ್ತರು ಸ್ಥಳೀಯ ಬ್ಯಾಂಕ್‌ಗಳಲ್ಲಿ ವಿಶೇಷ ವಿದ್ಯುನ್ಮಾನ ಕಾರ್ಡ್ಸ್ ಉಪಯೋಗಿಸಿ ಹಣ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಈ ಯೋಜನೆಯಲ್ಲಿ ನಿಜಕ್ಕೂ ಸಮಸ್ಯೆ ಉದ್ಭವಿಸಿದ್ದು, ಸಾರ್ವಜನಿಕರ ಅಪ್ರಾಮಾಣಿಕತೆಯಿಂದಾಗಿಯೇ ಹೊರತು, ಅಧಿಕಾರಿಗಳ ಭ್ರಷ್ಟಾಚಾರದಿಂದಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.